ವಿಶೇಷಗಿನ್ನಿಸ್ ವಿಶ್ವ ದಾಖಲೆ ಮುರಿಯಲು ಸಜ್ಜು: ಒಂದೆಡೆ ಸೇರಿದ ಕೊಡವ ಸಮಾಜದ ಸುಮಾರು 6,000 ಜನ!
ಗಿನ್ನಿಸ್ ವಿಶ್ವ ದಾಖಲೆ ಮಾಡಬೇಕೆಂಬ ಗುರಿಯೊಂದಿಗೆ ಕೊಡವ ಸಮಾಜದ ಸುಮಾರು 6,000 ಜನರು ಶನಿವಾರ ವಿರಾಜಪೇಟೆಯ ಬಿಟ್ಟಂಗಾಲದಲ್ಲಿ ಒಂದೆಡೆ ಸೇರಿದರು. ವಿಶ್ವದ ಅತ್ಯಂತ ದೊಡ್ಡ ಕುಟುಂಬದ ದಾಖಲೆಯನ್ನು ಮುರಿಯಲು ಅವರೆಲ್ಲರನ್ನೂ ಒಂದೇ ಸೂರಿನಡಿ ಕೊಡವ ಕ್ಲಾನ್ ಪೋರ್ಟಲ್ ಸೇರಿಸಿದ್ದು, ಇದಕ್ಕೆ ಒಕ್ಕೂಟ ಎಂದು ಹೆಸರಿಡಲಾಗಿತ್ತು.