ರಾಜಕೀಯಮುಜುಗರದ ಹೇಳಿಕೆ ನೀಡದಂತೆ, ಸಚಿವರು, ಶಾಸಕರಿಗೆ ರಾಜ್ಯ ಬಿಜೆಪಿ ನಿರ್ಬಂಧ ಸಾಧ್ಯತೆ
ಪಕ್ಷದ ಕೆಲ ಶಾಸಕರು, ಸಚಿವರು ನೀಡಿರುವ ವಿವಾದಾತ್ಮಕ ಹೇಳಿಕೆಗಳಿಂದ ತೀವ್ರ ಮುಜುಗರಕ್ಕೊಳಗಾಗಿರುವ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕರು, ಸಚಿವರು ಇನ್ನು ಮುಂದೆ ಮುಜುಗರ ತರುವಂತಹ ಯಾವುದೇ ಹೇಳಿಕೆ ನೀಡದಂತೆ ನಿರ್ಬಂಧ ವಿಧಿಸಲು ಗಂಭೀರವಾಗಿ ಪರಿಶೀಲಿಸುತ್ತಿದ್ದಾರೆಎಂದು ಪಕ್ಷದ ಉನ್ನತ ಮೂಲಗಳು ಹೇಳಿವೆ.