ದೇಶಉದ್ಯೋಗಕ್ಕಾಗಿ ಭೂ ಹಗರಣ: ರಾಬ್ರಿದೇವಿ, ಇಬ್ಬರು ಪುತ್ರಿಯರಿಗೆ ಕೋರ್ಟ್ ಸಮನ್ಸ್!
ಉದ್ಯೋಗಕ್ಕಾಗಿ ಭೂ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಸಲ್ಲಿಸಿರುವ ಮೊದಲ ಆರೋಪಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಮತ್ತು ಅವರ ಪುತ್ರಿಯರಾದ ರಾಜ್ಯಸಭಾ ಸಂಸದೆ ಮಿಸಾ ಭಾರ್ತಿ ಮತ್ತು ಹೇಮಾ ಯಾದವ್ಗೆ ದೆಹಲಿ ನ್ಯಾಯಾಲಯ ಶನಿವಾರ ಸಮನ್ಸ್ ಜಾರಿ ಮಾಡಿದೆ.