ವಿದೇಶಉಕ್ರೇನ್ ಗಡಿಯ ಜನವಸತಿ ಪ್ರದೇಶದಲ್ಲಿ ರಷ್ಯಾದ ಮಿಲಿಟರಿ ಜೆಟ್ ಪತನ, 13 ಮಂದಿ ಸಾವು
ರಷ್ಯಾದ ಸೇನಾ ವಿಮಾನವೊಂದು ಉಕ್ರೇನ್ ಗಡಿಯ ಸಮೀಪವಿರುವ ನೈರುತ್ಯ ರಷ್ಯಾದ ಪಟ್ಟಣವಾದ ಯೆಸ್ಕ್ನ ವಸತಿ ಪ್ರದೇಶದಲ್ಲಿ ಪತನಗೊಂಡಿದ್ದು, ಪರಿಣಾಮವಾಗಿ ಮೂವರು ಮಕ್ಕಳು ಸೇರಿದಂತೆ ಕನಿಷ್ಠ 13 ಜನರು ಮೃತಪಟ್ಟಿದ್ದಾರೆ ಎಂದು ಮಾಸ್ಕೊದ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.