ಮಿಚಾಂಗ್ ಚಂಡಮಾರುತ

ಪರಿಹಾರ ಕಾರ್ಯಗಳಲ್ಲಿ ಪಾಲ್ಗೊಳ್ಳುವವರಿಗೆ ನೆರವಾಗಲು ಸಹಾಯ ಕೇಂದ್ರ ಸ್ಥಾಪಿಸಿದ ತಮಿಳುನಾಡು ಸರ್ಕಾರ
ಮಿಚಾಂಗ್ ಚಂಡಮಾರುತದಿಂದಾಗಿ ನೆರೆ ಪ್ರವಾಹಕ್ಕೆ ಸಿಲುಕಿರುವ ಚೆನ್ನೈನಲ್ಲಿ ಪರಿಹಾರ ಕಾರ್ಯಗಳಲ್ಲಿ ಸ್ವಯಂಪ್ರೇರಿತವಾಗಿ ಭಾಗವಹಿಸುವ ಎನ್‌ಜಿಒ, ಸ್ವಯಂಸೇವಕರನ್ನು ಸಂಘಟಿಸಲು ಸಹಾಯ ಕೇಂದ್ರವನ್ನು ತಮಿಳುನಾಡು ಸರ್ಕಾರ ಸ್ಥಾಪಿಸಿದೆ.

ಮಿಚಾಂಗ್ ಚಂಡಮಾರುತ: ತಮಿಳು ನಾಡಿನಲ್ಲಿ ಮೃತರ ಸಂಖ್ಯೆ 17ಕ್ಕೆ ಏರಿಕೆ; ವಾಯು ಸಮೀಕ್ಷೆ, ತಗ್ಗಿದ ಮಳೆಯ ಅಬ್ಬರ
ಮಿಚಾಂಗ್ ಚಂಡಮಾರುತವು ಇಂದು ಬುಧವಾರ ಹೊತ್ತಿಗೆ ಆಂಧ್ರ ಪ್ರದೇಶದ ಮಧ್ಯ ಕರಾವಳಿಯ ಆಳವಾದ ಭಾಗದಲ್ಲಿ ದುರ್ಬಲಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಮಿಚಾಂಗ್ ಚಂಡಮಾರುತ: ಕೇಂದ್ರದಿಂದ ತಮಿಳು ನಾಡಿಗೆ 5 ಸಾವಿರ ಕೋಟಿ ರೂ. ಪರಿಹಾರಕ್ಕೆ ಡಿಎಂಕೆ ಸಂಸದ ಒತ್ತಾಯ
ಚೆನ್ನೈ ಮತ್ತು ರಾಜ್ಯದ ಇತರ ಕೆಲವು ಜಿಲ್ಲೆಗಳಲ್ಲಿ ನಿರಂತರ ಮಳೆಯಿಂದ ಹಾನಿಗೊಳಗಾದ ಜನರಿಗೆ ಪರಿಹಾರ ಮತ್ತು ಮೂಲಸೌಕರ್ಯಗಳನ್ನು ಮರುನಿರ್ಮಾಣ ಮಾಡಲು ತಮಿಳುನಾಡು ಸರ್ಕಾರವು 5,000 ಕೋಟಿ ರೂಪಾಯಿಗಳ ಮಧ್ಯಂತರ ಪರಿಹಾರವನ್ನು ಕೇಂದ್ರ ಸರ್ಕಾರಕ್ಕೆ ಕೋರಿದೆ.

ಆಂಧ್ರ ಪ್ರದೇಶದ ಬಾಪಟ್ಲಾಗೆ ಅಪ್ಪಳಿಸಿದ ಮಿಚಾಂಗ್ ಚಂಡಮಾರುತ
ದಕ್ಷಿಣ ಆಂಧ್ರಪ್ರದೇಶ ಕರಾವಳಿಯ ಬಾಪಟ್ಲಾಗೆ ಮಿಚಾಂಗ್ ಚಂಡಮಾರುತ ಅಪ್ಪಳಿಸಿದ್ದು, ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಮಿಚಾಂಗ್ ಚಂಡಮಾರುತ ಎಫೆಕ್ಟ್: ನಗರದಲ್ಲಿ ಇನ್ನೆರಡು ದಿನ ಚಳಿ ವಾತಾವರಣ
ತಮಿಳುನಾಡು ಮತ್ತು ಆಂಧ್ರಪ್ರದೇಶದ ಮೇಲೆ ಮಿಚಾಂಗ್ ಚಂಡಮಾರುತ ಪರಿಣಾಮ ಬೀರಿದ್ದು, ಇದರ ಎಫೆಕ್ಟ್ ರಾಜ್ಯ ರಾಜಧಾನಿ ಬೆಂಗಳೂರಿನ ಮೇಲೂ ಪರಿಣಾಮ ಬೀರಿದೆ. ಹೀಗಾಗಿಯೇ ಮಳೆಯ ಕೊರತೆ ಕಂಡಿದ್ದ ನಗರದಲ್ಲಿ ಮಳೆ ಜೊತೆಗೆ ತಂಪಿನ ವಾತಾವರಣ ಕಂಡು ಬಂದಿದೆ.

ಮಿಚಾಂಗ್ ಚಂಡಮಾರುತ ಎಫೆಕ್ಟ್: 33 ವಿಮಾನಗಳು ಚೆನ್ನೈನಿಂದ ಬೆಂಗಳೂರಿಗೆ ಡೈವರ್ಟ್
ಮಿಚಾಂಗ್ ಚಂಡಮಾರುತದ ಪ್ರಭಾವದಿಂದ ತಮಿಳುನಾಡು ರಾಜಧಾನಿ ಮತ್ತು ನೆರೆಯ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಚೆನ್ನೈ ವಿಮಾನ ನಿಲ್ದಾಣ ಸಂಪೂರ್ಣ ಜಲಾವೃತವಾಗಿದೆ. ಹೀಗಾಗಿ 33 ವಿಮಾನಗಳನ್ನು ಚೆನ್ನೈನಿಂದ...

ಮಿಚಾಂಗ್ ಚಂಡಮಾರುತ: ಮುಳುಗಿದ ಚೆನ್ನೈ, ವಿದ್ಯುತ್ ಸ್ಥಗಿತ; '2015ರ ಪ್ರವಾಹದ ನಂತರ ಅತಿ ದೊಡ್ಡ ಮಳೆ'
ಮಿಚಾಂಗ್ ಚಂಡಮಾರುತದ ಪರಿಣಾಮ ತಮಿಳುನಾಡಿನಲ್ಲಿ ಅದರಲ್ಲೂ ಚೆನ್ನೈನಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ರಾಜಧಾನಿಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ನಗರದ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಸಾಮಾನ್ಯ ಜನಜೀವನ...

'ಮಿಚಾಂಗ್' ಚಂಡಮಾರುತ ಅಬ್ಬರ: ತಮಿಳುನಾಡಿನಾದ್ಯಂತ ಹೈ ಅಲರ್ಟ್, ರೈಲು-ವಿಮಾನ ಸಂಚಾರ ಸ್ಥಗಿತ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರೂಪುಗೊಂಡಿರುವ ಮಿಚಾಂಗ್ ಚಂಡಮಾರುತ ತಮಿಳುನಾಡಿನಲ್ಲಿ ಭಾರಿ ಅನಾಹುತ ಸೃಷ್ಟಿ ಮಾಡುತ್ತಿದೆ.

ಮಿಚಾಂಗ್ ಚಂಡಮಾರುತ: ತಮಿಳುನಾಡಿನಲ್ಲಿ ಭಾರಿ ಮಳೆ, ರಸ್ತೆಗಳು ಜಲಾವೃತ, ಶಾಲೆಗಳಿಗೆ ರಜೆ, ರೈಲು-ವಿಮಾನ ಸಂಚಾರ ಸ್ಥಗಿತ
ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಂಡಿರುವ ಪರಿಣಾಮ ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದ್ದು ಪರಿಣಾಮ ರಾಜಧಾನಿ ಚೆನ್ನೈ ಸೇರಿದಂತೆ ತಮಿಳುನಾಡಿನ ಕರಾವಳಿ ಜಿಲ್ಲೆಗಳಲ್ಲಿ ರಸ್ತೆಗಳು ಜಲಾವೃತವಾಗಿವೆ.

