ರಾಜ್ಯಹಾಸನ: ಮಹಿಳೆಗೆ ಸ್ಫೋಟಕದೊಂದಿಗೆ ಪಾರ್ಸೆಲ್ ಕಳುಹಿಸಿದ ದುಷ್ಕರ್ಮಿ ಬಂಧನ
ಇತ್ತೀಚಿಗೆ ಹಾಸನದಲ್ಲಿ ಸಂಭವಿಸಿದ್ದ ಮಿಕ್ಸರ್ ಸ್ಫೋಟ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಧವೆ ವಸಂತಾಳ ಹತ್ಯೆಗೆ ಸ್ಫೋಟಕವಿದ್ದ ಮಿಕ್ಸರ್ ನ್ನು ಕೊರಿಯರ್ ಮೂಲಕ ಕಳುಹಿಸಿದ ಬೆಂಗಳೂರಿನ ಅನೂಪ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಬುಧವಾರ ತಿಳಿಸಿದ್ದಾರೆ.