ದೇಶಕೊರೋನಾ: ವೆಂಟಿಲೇಟರ್, ಮಾಸ್ಕ್ ಗಳ ರಫ್ತು ನಿಷೇಧಕ್ಕೆ ವಿಳಂಬ-ಮೋದಿ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಳಿ
ಕೊರೋನಾವೈರಸ್ ಏಕಾಏಕಿ ಹಾವಳಿ ನಡುವೆ ಜೀವ ಉಳಿಸುವ ಸಾಧನಗಳಾದ ವೆಂಟಿಲೇಟರ್ ಮತ್ತು ಸರ್ಜಿಕಲ್ ಮಾಸ್ಕ್ ರಫ್ತು ಮಾಡುವುದನ್ನು ನಿಷೇಧಿಸುವ ಸರ್ಕಾರದ ನಿರ್ಧಾರದಲ್ಲಿನ "ವಿಳಂಬ" ಕುರಿತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು.