ದೇಶರಾಹುಲ್ ಮಾವೋವಾದಿ ಭಾಷೆ ಬಳಕೆ, ಕಾಂಗ್ರೆಸ್ ಆಳ್ವಿಕೆಯ ರಾಜ್ಯಗಳಲ್ಲಿ ಹೂಡಿಕೆ ಮಾಡಲು ಕಂಪನಿಗಳು 50 ಬಾರಿ ಯೋಚಿಸುತ್ತವೆ: ಮೋದಿ
ಕಾಂಗ್ರೆಸ್ ಮತ್ತು ಅದರ ನಾಯಕ ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಭಾನುವಾರ ವಾಗ್ದಾಳಿ ನಡೆಸಿದ್ದು, ರಾಹುಲ್ ಗಾಂಧಿ ಅವರ ಮಾವೋವಾದಿ ಭಾಷೆಯ ಬಳಕೆಯಿಂದಾಗಿ ಯಾವುದೇ ಕೈಗಾರಿಕೋದ್ಯಮಿ ಕಾಂಗ್ರೆಸ್ ಪಕ್ಷಗಳ ಆಳ್ವಿಕೆಯಿರುವ ರಾಜ್ಯಗಳಲ್ಲಿ ಹೂಡಿಕೆ ಮಾಡುವ ಮೊದಲು 50 ಬಾರಿ ಯೋಚಿಸುತ್ತಾರೆ ಎಂದು ಪ್ರತಿಪಾದಿಸಿದ್ದಾರೆ.