ಕ್ರೀಡೆOlympics 2024: ಜಿಮ್ನಾಸ್ಟಿಕ್ ನಲ್ಲಿ ಅನ್ಯಾಯ ಆರೋಪ, ಒಲಿಂಪಿಕ್ಸ್ ಕ್ರೀಡಾಕೂಟ ಸಮಾರೋಪಕ್ಕೆ ರೊಮೇನಿಯಾ ಪ್ರಧಾನಿ ಗೈರು
ಒಲಿಂಪಿಕ್ಸ್ ಕ್ರೀಡಾಕೂಟದ ಜಿಮ್ನಾಸ್ಟ್ ಕ್ರೀಡೆಯಲ್ಲಿ 3ನೇ ಸ್ಥಾನದಲ್ಲಿದ್ದ ರೊಮೇನಿಯಾ ಸ್ಪರ್ಧಿ ಬಾರ್ಬೋಸು ಅಮೆರಿಕದ ಸ್ಪರ್ಧಿಗಳು ಮತ್ತು ಅಧಿಕಾರಿಗಳು ಪುನರ್ ಪರಿಶೀಲನೆಗೆ ಮನವಿ ಸಲ್ಲಿಸಿದ ಬಳಿಕ 4ನೇ ಸ್ಥಾನಕ್ಕೆ ಕುಸಿದಿದ್ದರು. ಇದು ರೊಮೇನಿಯಾ ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.