ರಾಜಕೀಯಸಿಎಂ ದುಬಾರಿ ವಾಚ್ ಪ್ರಕರಣ: "ಉಡುಗೊರೆ ಹಿಂದೆ ಭ್ರಷ್ಟಾಚಾರ" ಎಂದ ಅನುಪಮಾ ಶೆಣೈ!
ಕೆಲ ದಿನಗಳ ಹಿಂದೆ ದೇಶಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಸಿಎಂ ಸಿದ್ದರಾಮಯ್ಯ ಅವರ ದುಬಾರಿ ಹೂಬ್ಲೋಟ್ ವಾಚ್ ಪ್ರಕರಣಕ್ಕೆ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಹೊಸ ತಿರುವು ನೀಡಿದ್ದು, ವಾಚ್ ಉಡುಗೊರೆ ಹಿಂದೆ ಬೃಹತ್ ಭ್ರಷ್ಟಾಚಾರ ಅಡಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.