ದೇಶಮಹಿಳೆಯರ ಮೇಲಿನ ಅಪರಾಧ: ಠಾಣಾ ವ್ಯಾಪ್ತಿಯ ಹೊರಗಿನ ಪ್ರಕರಣಗಳಲ್ಲಿ 'ಝೀರೋ ಎಫ್ಐಆರ್' ದಾಖಲಿಸಿ; ಕೇಂದ್ರ ಗೃಹ ಸಚಿವಾಲಯ ಸೂಚನೆ
ಮಹಿಳೆಯರ ಸುರಕ್ಷತೆ ಮತ್ತು ಅವರ ಮೇಲಿನ ಅಪರಾಧ ಕೃತ್ಯ ಪ್ರಕರಣಗಳನ್ನು ಹೇಗೆ ನಿಭಾಯಿಸುವುದು ಎಂಬ ಬಗ್ಗೆ ರಾಜ್ಯಗಳಿಗೆ ಸಲಹೆ ಹೊರಡಿಸಿರುವ ಕೇಂದ್ರ ಗೃಹ ಸಚಿವಾಲಯ, ಪೊಲೀಸರ ಕಡೆಯಿಂದ ನಿಯಮ ಪಾಲನೆಯಲ್ಲಿ ಯಾವುದೇ ರೀತಿಯ ವೈಫಲ್ಯಗಳುಂಟಾದರೆ ನ್ಯಾಯ ಸಲ್ಲಿಕೆಗೆ ತೊಂದರೆಯಾಗುತ್ತದೆ ಎಂದು ಹೇಳಿದೆ.