ಮಹಿಳಾ ಕ್ರಿಕೆಟಿಗರು

ವಿಂಡೀಸ್ ಕ್ರಿಕೆಟ್ ಗೆ ಶಾಕ್: ಮಹಿಳಾ ತಂಡದ 4 ಪ್ರಮುಖ ಆಟಗಾರ್ತಿಯರು ಒಂದೇ ದಿನ ನಿವೃತ್ತಿ ಘೋಷಣೆ!
ಜಾಗತಿಕ ಮಹಿಳಾ ಕ್ರಿಕೆಟ್ ಗೆ ವೆಸ್ಟ್ ಇಂಡೀಸ್ ತಂಡ ಶಾಕ್ ನೀಡಿದ್ದು, ತಂಡದ ನಾಲ್ಕು ಪ್ರಮುಖ ಆಟಗಾರ್ತಿಯರು ಒಂದೇ ದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

ವೇತನ ಸಮಾನತೆ: ಪುರುಷರಷ್ಟೇ ಮಹಿಳಾ ಕ್ರಿಕೆಟಿಗರಿಗೂ ಸಮಾನ ಪಂದ್ಯ ಶುಲ್ಕ- ಬಿಸಿಸಿಐ ಘೋಷಣೆ
ಕ್ರಾಂತಿಕಾರಕ ನಿರ್ಧಾರವೊಂದರಲ್ಲಿ ಲಿಂಗ ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ ಬಿಸಿಸಿಐ ಗುರುವಾರ ತನ್ನ ಕೇಂದ್ರೀಯ ಗುತ್ತಿಗೆ ಪಡೆದ ಮಹಿಳಾ ಮತ್ತು ಪುರುಷ ಆಟಗಾರರಿಗೆ ಸಮಾನ ಪಂದ್ಯ ಶುಲ್ಕವನ್ನು ಘೋಷಿಸಿದೆ. ಇದನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.

