ರಾಜ್ಯರಾಜ್ಯದಲ್ಲಿ ಮಹಿಳೆಯರಿಗೆ ಪ್ರತ್ಯೇಕ ನಾಲ್ಕು ಕೈಗಾರಿಕಾ ಪಾರ್ಕ್ ಗಳು: ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ
ರಾಜ್ಯದ ಮೈಸೂರು, ಧಾರವಾಡ, ಹಾರೋಹಳ್ಳಿ ಮತ್ತು ಕಲಬುರಗಿಗಳಲ್ಲಿ ಮಹಿಳಾ ಉದ್ಯಮಿಗಳಿಗೆ ಮೀಸಲಾದ ಪ್ರತ್ಯೇಕ ಕೈಗಾರಿಕಾ ಪಾರ್ಕ್ ನ್ನು ಸ್ಥಾಪಿಸಲಾಗುವುದು ಎಂದು ಭಾರೀ ಮತ್ತು ಮಧ್ಯಮ ಗಾತ್ರ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ. ಮಹಿಳಾ ಉದ್ಯಮಿಗಳಿಗೆ ಮೀಸಲಾದ ಪಾರ್ಕ್ ದೇಶದಲ್ಲಿಯೇ ಮೊದಲನೆಯದು.