ದೇಶಕುಸ್ತಿಪಟುಗಳ ಪ್ರತಿಭಟನೆ: ಜೂನ್ 1 ರಂದು ಮುಜಾಫರ್ನಗರದಲ್ಲಿ ‘ಮಹಾ ಪಂಚಾಯತ್‘ ನಡೆಸುವುದಾಗಿ ಟಿಕಾಯತ್ ಘೋಷಣೆ
ಲೈಂಗಿಕ ಕಿರುಕುಳ ಆರೋಪದ ಮೇಲೆ ಡಬ್ಲ್ಯುಎಫ್ಐ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಯ ಕುರಿತು ಚರ್ಚಿಸಲು ಮುಜಾಫರ್ನಗರದ ಸೊರಮ್ ಗ್ರಾಮದಲ್ಲಿ ಗುರುವಾರ 'ಮಹಾಪಂಚಾಯತ್' ನಡೆಯಲಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ನರೇಶ್ ಟಿಕಾಯತ್ ಬುಧವಾರ ಹೇಳಿದ್ದಾರೆ.