ರಾಜ್ಯಬಜೆಟ್ ನಲ್ಲಿ ಮಹಾದಾಯಿ ನೀರು ಬಳಕೆಗೆ ಸೂಕ್ತ ಅನುದಾನ: ಸಿಎಂ ಯಡಿಯೂರಪ್ಪ
ಮಹಾದಾಯಿ ನೀರು ಹಂಚಿಕೆಯ ಐತೀರ್ಪಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ, ನ್ಯಾಯಾಧಿಕರಣ ನೀಡಿರುವ ನೀರಿನ ಸಮರ್ಥ ಬಳಕೆಗೆ ಮುಂದಿನ ಬಜೆಟ್ ನಲ್ಲಿ ಸೂಕ್ತ ಅನುದಾನ ಮೀಸಲಿರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.