ದೇಶಮಧ್ಯ ಪ್ರದೇಶ: ಶಾಲಾ ಸಮವಸ್ತ್ರ ವಿವಾದ, ಶಿಕ್ಷಣಾಧಿಕಾರಿ ಮೇಲೆ ಶಾಯಿ ಎರಚಿದ ಬಿಜೆಪಿ ಮುಖಂಡ!
ಶಾಲಾ ಸಮವಸ್ತ್ರ ವಿವಾದ ಹಿನ್ನೆಲೆಯಲ್ಲಿ ಶಿಕ್ಷಣಾಧಿಕಾರಿ ಮೇಲೆ ಕೆಲ ಬಿಜೆಪಿ ಮುಖಂಡರು ಶಾಯಿ ಎರಚಿರುವ ಘಟನೆ ಮಧ್ಯಪ್ರದೇಶದ ದಾಮೋಹ್ ನಲ್ಲಿ ಮಂಗಳವಾರ ನಡೆದಿದೆ. ಸಮವಸ್ತ್ರವಾಗಿ ಹೆಡ್ ಸ್ಕಾರ್ಫ್ ಬಳಸುತ್ತಿರುವ ಖಾಸಗಿ ಶಾಲೆಯೊಂದರ ಪರವಾಗಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಶಿಕ್ಷಣಾಧಿಕಾರಿಯ ಮೇಲೆ ಮಸಿ ಎರಚಲಾಗಿದೆ.