ರಾಜ್ಯಮಳೆಗಾಗಿ ದೇವರ ಮೊರೆ ಹೋದ ಸರ್ಕಾರ: ದೇವಾಲಯಗಳಲ್ಲಿ ಪರ್ಜನ್ಯ ಜಪ, ಹೋಮ ನಡೆಸಲು ಆದೇಶ
ಮಳೆ ಕೊರತೆಯಿಂದ ಭೀಕರ ಬರಗಾಲಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ದೇವರ ಮೊರೆ ಹೋಗಿರುವ ಸರ್ಕಾರ ರಾಜ್ಯದ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ಪರ್ಜನ್ಯ ಜಪ, ಅಭಿಷೇಕ , ಹೋಮ, ವಿಶೇಷ ಪೂಜೆ ನಡೆಸುವಂತೆ ಧಾರ್ಮಿಕ ದತ್ತಿ ಹಾಗೂ ಮುಜರಾಯಿ ಸಚಿವಾಲಯ ಎಲ್ಲಾ ದೇವಾಲಯಗಳಿಗೆ ಸುತ್ತೋಲೆ ಹೊರಡಿಸಿದೆ.