ಮಲ ಹೊರುವ ಪದ್ಧತಿ

ಕರ್ನಾಟಕದಲ್ಲಿರುವ 7,483 ಮಲ ಹೊರುವ ಕಾರ್ಮಿಕರ ಪುನರ್ವಸತಿಗೆ 1000 ಕೋಟಿ ರೂ: ಡಾ. ಹೆಚ್.ಸಿ ಮಹದೇವಪ್ಪ
ಗುರುತಿಸಲ್ಪಟ್ಟ ಎಲ್ಲಾ ಮಲ ಹೊರುವ ಕಾರ್ಮಿಕರ ಮನೆಗಳು, ಸುಸ್ಥಿರ ಉದ್ಯೋಗಾವಕಾಶಗಳು ಮತ್ತು ಸಾಮಾಜಿಕ ರಕ್ಷಣಾ ಯೋಜನೆಗಳಿಗೆ ಪ್ರವೇಶವನ್ನು ಒದಗಿಸುವ ಮೂಲಕ ಶಾಶ್ವತ ಪುನರ್ವಸತಿ ಕಲ್ಪಿಸುವುದು ರಾಜ್ಯ ಸರ್ಕಾರ ಉದ್ದೇಶವಾಗಿದೆ.

ಮಲ ಹೊರುವ ಕೆಲಸ ಮಾಡಿಸಿದರೆ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮಲ ಹೊರುವ ಪದ್ದತಿ ಇರಕೂಡದು. ಯಾರಾದರೂ ಮಲ ಹೊರುವ ಕೆಲಸ ಮಾಡಿಸಿದರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಮಲ ಹೊರುವ ಪದ್ಧತಿ ಇನ್ನೂ ಜೀವಂತ: ಇಂತಹ ಪ್ರಕರಣದಲ್ಲಿ ಯಾರೊಬ್ಬರಿಗೂ ಶಿಕ್ಷೆ ಆಗಿಲ್ಲ ಏಕೆ?; ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ
ಮಲ ಹೊರುವ ಪದ್ಧತಿಯನ್ನು ಜೀವಂತವಾಗಿಟ್ಟಿದ್ದರೂ ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ ಏಕೆ? ಇದೊಂದು ರೀತಿಯಲ್ಲಿ ನ್ಯಾಯದ ವಿಡಂಬನೆ" ಎಂದು ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ಕಿಡಿಕಾರಿದೆ.

ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ವಚ್ಛಗೊಳಿಸುವ ವೇಳೆ ಇಬ್ಬರು ಕಾರ್ಮಿಕರ ಸಾವು: ಸರ್ಕಾರದ ವಿರುದ್ಧ ನಾಗರೀಕರ ಪ್ರತಿಭಟನೆ
ಪ್ರೆಸ್ಟೀಜ್ ಫಾಲ್ಕನ್ ಸಿಟಿ ಅಪಾರ್ಟ್‌ಮೆಂಟ್‌ನಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ವಚ್ಛಗೊಳಿಸುವ ವೇಳೆ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದ ಘಟನೆ ವರದಿಯಾಗಿದ್ದು, ಮಲ ಹೊರುವ ಪದ್ಧತಿಯನ್ನು ತೊಡೆದು ಹಾಕುವಲ್ಲಿ ಸರ್ಕಾರ ವಿಫಲವಾಗಿರುವ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ನಾಗರೀಕ ಹೋರಾಟಗಾರರು ಮಂಗಳವಾರ ಪ್ರತಿಭಟನೆ ನಡೆಸಿದರು.

ಮಲ ಹೊರುವವರ ಮರಣ ಪ್ರಮಾಣದಲ್ಲಿ ಏರಿಕೆ: ಇನ್ನೂ ಜೀವಂತವಾಗಿರುವ ಅನಿಷ್ಟ
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಅಂಕಿಅಂಶ ಪ್ರಕಾರ, 2013ರಿಂದ ಇಲ್ಲಿಯವರೆಗೆ...

