ರಾಜ್ಯಬೆಂಗಳೂರು: 11 ವರ್ಷದ ಬಾಲಕನ ತುಂಡರಿಸಿದ ಕೈಯನ್ನು ಯಶಸ್ವಿಯಾಗಿ ಮರು ಜೋಡಿಸಿದ ವೈದ್ಯರು
ಆಂಧ್ರಪ್ರದೇಶದ ಕುಪ್ಪಂ ಮೂಲದ ಚರಣ್ (11) ಎಂಬಾತ ಹುಲ್ಲು ಕತ್ತರಿಸುವ ಯಂತ್ರಕ್ಕೆ ಸಿಲುಕಿದ್ದ ಮರದ ಕಡ್ಡಿಯೊಂದನ್ನು ಕಿತ್ತು ಹಾಕಲು ಯತ್ನಿಸುವಾಗ ಮುಂಗೈ ತುಂಡಾಗಿ ಬಿದ್ದಿದೆ. ಆತನನ್ನು ಸ್ಥಳೀಯ ವೈದ್ಯಕೀಯ ಕಾಲೇಜಿಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ, ನಂತರ ಬೆಂಗಳೂರಿನ ನಾರಾಯಣ ಹೆಲ್ತ್ಗೆ ಕಳುಹಿಸಲಾಗಿದೆ.