ದೇಶಮೋದಿ ತವರಿನಲ್ಲಿ ರೂ.71 ಕೋಟಿಯ MGNREGA ಹಗರಣ ಬಯಲಿಗೆ; ಸಚಿವ ಖಬಾದ್ ಪುತ್ರನ ಬಂಧನ, ಮತ್ತೋರ್ವ ನಾಪತ್ತೆ!
ರಸ್ತೆಗಳು, ಬಂಡ್ಗಳು ಮತ್ತಿತರ ಮೂಲ ಸೌಕರ್ಯ ನಿರ್ಮಾಣಗಳ ಕಾಮಗಾರಿಗಳ ಹೆಸರಿನಲ್ಲಿ ಹಗರಣ ನಡೆದಿದೆ. ಅದು ಕೇವಲ ಕಾಗದದಲ್ಲಿ ಮಾತ್ರ ಇದೆ. MGNREGA ಅಡಿಯಲ್ಲಿ ನಕಲಿ ಬಿಲ್ ತಯಾರಿಸಿ ಹಣ ಲಪಟಾಯಿಸಲಾಗಿದೆ. ಹಣವನ್ನು ಸಚಿವರ ಪುತ್ರರಿಗೆ ಸಂಬಂಧಿಸಿದ ಏಜೆನ್ಸಿಗಳಿಗೆ ವರ್ಗಾಯಿಸಲಾಗಿದೆ ಎಂದು ವರದಿಯಾಗಿದೆ.