ರಾಜ್ಯಕೊಡಗು ಪ್ರವಾಹ: ಪ್ರಕೃತಿ ವಿಕೋಪವಲ್ಲ, ಮನುಷ್ಯನ ಸ್ವಯಂಕೃತ ಅಪರಾಧ: ಪರಿಸರ ತಜ್ಞರು
ದಕ್ಷಿಣದ ಕಾಶ್ಮೀರ, ಭೂಲೋಕದ ಪ್ರಕೃತಿ ಸ್ವರ್ಗ ಎಂದು ಹೆಸರಾಗಿರುವ ಕೊಡಗು ಇಂದು ಅಕ್ಷರಶಃ ನರಕದ ರಾಜಧಾನಿಯಾಗಿ ಮಾರ್ಪಟ್ಟಿದ್ದು, ಭಾಗಶಃ ಕೊಡಗು ಪ್ರವಾಹದಲ್ಲಿ ಮುಳುಗಿದೆ. ಆದರೆ ಕೊಡಗಿನ ಈ ಸ್ಥಿತಿಗೆ ಮನುಷ್ಯನ ಸ್ವಯಂಕೃತ ಅಪರಾಧವೇ ಕಾರಣ ಎಂದು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.