ದೇಶಸಣ್ಣ, ಮಧ್ಯಮ ಉದ್ಯಮಕ್ಕೆ ಉತ್ತೇಜನ ಸಿಕ್ಕರೆ ಲೂಧಿಯಾನ ಚೀನಾದೊಂದಿಗೆ ಸ್ಪರ್ಧಿಸಬಹುದು: ರಾಹುಲ್
ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸೂಕ್ತ ಬೆಂಬಲ ನೀಡಿದರೆ ಲೂಧಿಯಾನ ಚೀನಾದೊಂದಿಗೆ ಸ್ಪರ್ಧಿಸಬಹುದು ಎಂದು ಗುರುವಾರ ಹೇಳಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಇವುಗಳನ್ನು ಉತ್ತೇಜಿಸುತ್ತಿಲ್ಲ ಎಂದು ಕೇಂದ್ರ ಮತ್ತು ಪಂಜಾಬ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.