ಮಧ್ಯಂತರ ಚುನಾವಣೆ

ಮಹಾರಾಷ್ಟ್ರ: ಮಧ್ಯಂತರ ಚುನಾವಣೆಗೆ ಸಿದ್ಧರಾಗಿ; ಪಕ್ಷದ ಕಾರ್ಯಕರ್ತರಿಗೆ ಉದ್ಧವ್ ಠಾಕ್ರೆ ಕರೆ
ಮಹಾರಾಷ್ಟ್ರದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಶನಿವಾರ ಭವಿಷ್ಯ ನುಡಿದಿದ್ದಾರೆ ಮತ್ತು ಈಗಿನಿಂದಲೇ ಸಿದ್ಧತೆಗಳನ್ನು ಪ್ರಾರಂಭಿಸಲು ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದಾರೆ.

ಜೆಡಿಯು ಮಹತ್ವದ ವಿಭಜನೆಯತ್ತ ಸಾಗಿದೆ, ಬಿಹಾರದಲ್ಲಿ ಮಧ್ಯಂತರ ಚುನಾವಣೆಯ ಸಾಧ್ಯತೆ: ಚಿರಾಗ್ ಪಾಸ್ವಾನ್
ಪ್ರಸ್ತುತ ಬಿಹಾರದಾದ್ಯಂತ ಆಶೀರ್ವಾದ್ ಯಾತ್ರೆ ನಡೆಸುತ್ತಿರುವ ಜಮುಯಿ ಎಲ್ ಜಿಪಿ ಸಂಸದ ಚಿರಾಗ್ ಪಾಸ್ವಾನ್, ಶುಕ್ರವಾರ ಜೆಡಿಯುನಲ್ಲಿ ದೊಡ್ಡ ವಿಘಟನೆ ಯಾಗಲಿದ್ದು, ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಪತನವಾಗಿ ರಾಜ್ಯದಲ್ಲಿ ಮಧ್ಯಕಾಲೀನ ವಿಧಾನಸಭಾ ಚುನಾವಣೆ ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಯಡಿಯೂರಪ್ಪ ಸರ್ಕಾರ ಶೀಘ್ರವೇ ಪತನ: ರಾಜ್ಯದಲ್ಲಿ ಮಧ್ಯಂತರ ಚುನಾವಣೆ: ಟಿ.ಬಿ. ಜಯಚಂದ್ರ
ರಾಜ್ಯದಲ್ಲಿ ಅಸ್ಥಿತ್ವದಲ್ಲಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪತನಗೊಳ್ಳಲಿದ್ದು, ಶೀಘ್ರವೇ ಮಧ್ಯಂತರ ಚುನಾವಣೆ ಎದುರಾಗಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ ಹೇಳಿದ್ದಾರೆ.

ಮಧ್ಯಂತರ ಚುನಾವಣೆ ಇಲ್ಲವೇ ಇಲ್ಲ: ಯಡಿಯೂರಪ್ಪ ಸ್ಪಷ್ಟನೆ
ಉಪ ಚುನಾವಣೆಯಲ್ಲಿ ತಾವು ಅಧಿಕ ಸೀಟುಗಳನ್ನು ಗೆಲ್ಲಲ್ಲಿದ್ದು, ಸರ್ಕಾರ ಸುಭದ್ರವಾಗಿರುತ್ತದೆ, ಹೀಗಿರುವಾಗ ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಎದುರಾಗುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಬಿಜೆಪಿಯಿಂದಲೇ ರಾಜ್ಯದಲ್ಲಿ ಮಧ್ಯಂತರ ಚುನಾವಣೆ -ಎಚ್ ಡಿ ಕುಮಾರಸ್ವಾಮಿ ಭವಿಷ್ಯ
ಕೇಂದ್ರದ ಬಿಜೆಪಿ ಹೈಕಮಾಂಡ್ ನಿರ್ಧಾರದಿಂದಲೇ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗಬಹುದು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಇಲ್ಲ: ಸಚಿವ ವಿ. ಸೋಮಣ್ಣ
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುವುದಿಲ್ಲ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಮೂರು ವರ್ಷ ಒಂಭತ್ತು ತಿಂಗಳು ಅಧಿಕಾರದಲ್ಲಿರುತ್ತದೆ ಎಂದು ವಸತಿ ಸಚಿವ ವಿ.ಸೋಮಣ್ಣ ಮಂಗಳವಾರ ಹೇಳಿದ್ದಾರೆ.

ಜು.30ರೊಳಗೆ ಬಿಜೆಪಿ ಸರ್ಕಾರ ರಚಿಸದಿದ್ದರೆ ಮಧ್ಯಂತರ ಚುನಾವಣೆ ಖಚಿತ: ಸಿದ್ದರಾಮಯ್ಯ
ಜುಲೈ 30 ರೊಳಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡದಿದ್ದರೆ ಮಧ್ಯಂತರ ಚುನಾವಣೆ ನಡೆಯುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ...

ಮಧ್ಯಂತರ ಚುನಾವಣೆಗೆ ಡಿವಿ ಸದಾನಂದಗೌಡ ವಿರೋಧ
ರಾಜ್ಯ ರಾಜಕೀಯದಲ್ಲಿ ಬಿಕ್ಕಟ್ಟು ತಲೆದೋರಿರುವಂತೆ ಮಧ್ಯಂತರ ಚುನಾವಣೆಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದಗೌಡ ವಿರೋಧ ವ್ಯಕ್ತಪಡಿಸಿದ್ದಾರೆ.

ಮಧ್ಯಂತರ ಚುನಾವಣೆಯಿಂದ ರಾಜ್ಯದ ಜನತೆಗೆ ಹೊರೆಯಾಗಲಿದೆ: ಡಿವಿ ಸದಾನಂದಗೌಡ
ಮಧ್ಯಂತರ ಚುನಾವಣೆಯಿಂದಾಗಿ ರಾಜ್ಯಗ ಜನತೆಗೆ ಹೆಚ್ಚುವರಿ ಹೊರೆಯಾಗಲಿದೆ, ಹೀಗಾಗಿ ಒಂದು ವೇಳೆ ಅವಕಾಶ ನೀಡಿದರೇ ಬಿಜೆಪಿ ಎಲ್ಲವನ್ನು ...

