ದೇಶINDIA ಮೈತ್ರಿಕೂಟಕ್ಕೆ ಇನ್ನೂ ಎರಡು ಪ್ರಾದೇಶಿಕ ಪಕ್ಷಗಳ ಸೇರ್ಪಡೆ
ಮುಂಬೈನಲ್ಲಿ ಗುರುವಾರ ನಡೆಯಲಿರುವ ಪ್ರತಿಪಕ್ಷಗಳ ನಿರ್ಣಾಯಕ ಮೂರನೇ ಸುತ್ತಿನ ಸಭೆಗೂ ಮುಂಚಿತವಾಗಿ, ಮತ್ತೆ ಎರಡು ಪ್ರಾದೇಶಿಕ ಪಕ್ಷಗಳು ಬುಧವಾರ INDIA ಮೈತ್ರಿಕೂಟ ಸೇರಿವೆ. ಇದರೊಂದಿಗೆ ಇಂಡಿಯಾ ಮೈತ್ರಿಕೂಟದ ಪಕ್ಷಗಳ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.