ಮತಗಳ್ಳತನ

'ಮತ ಕಳ್ಳತನದಿಂದ ಗೆದ್ದಿರುವ ಬಿಜೆಪಿ ಸಂಸದರು ನುಸುಳುಕೋರರು; ನ್ಯಾಯಸಮ್ಮತ ಚುನಾವಣೆ ನಡೆದರೆ ಲೋಕಸಭೆಯಲ್ಲಿ 140 ಸ್ಥಾನ ಗೆಲ್ಲುತ್ತಿರಲಿಲ್ಲ'
ಮತ ಕಳ್ಳತನದ ಮೂಲಕ ಕೆಲವೊಮ್ಮೆ ವೈಯಕ್ತಿಕ ಸ್ಥಾನಗಳನ್ನು ಕದಿಯಲಾಗುತ್ತದೆ. ಇನ್ನು ಕೆಲವು ಬಾರಿ ಇಡೀ ಸರ್ಕಾರವನ್ನೇ ಕದಿಯಬಹುದು. ಲೋಕಸಭೆಯಲ್ಲಿ ಈಗಿರುವ ಬಿಜೆಪಿಯ 240 ಸಂಸದರಲ್ಲಿ ಪ್ರತಿ ಆರನೇ ಸಂಸದರು ಮತ ಕಳ್ಳತನದ ಮೂಲಕವೇ ಗೆದ್ದಿದ್ದಾರೆ.

ಬಿಎಂಸಿ ಚುನಾವಣೆಯಲ್ಲಿ ಸುಲಭವಾಗಿ ಅಳಿಸಬಹುದಾದ ಶಾಯಿ: 'ವೋಟ್ ಚೋರಿ'ಯ ಮತ್ತೊಂದು ಮುಖ - ಸಿಎಂ ಸಿದ್ದರಾಮಯ್ಯ
ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ (BMC) ಸ್ಯಾನಿಟೈಸರ್, ಅಸಿಟೋನ್ ಮತ್ತು ಇತರ ಏಜೆಂಟ್‌ಗಳಿಂದ ಕೈ ಬೆರಳಿಗೆ ಹಾಕುವ ಶಾಯಿಯನ್ನು ಸುಲಭವಾಗಿ ಅಳಿಸಿಹಾಕುವುದನ್ನು ತೋರಿಸುತ್ತವೆ.

ಆಳಂದ ಮತಗಳ್ಳತನ ಪ್ರಕರಣ: ಆರೋಪ ನಿರಾಕರಿಸಿದ ಸುಭಾಷ್ ಗುತ್ತೇದಾರ್
ಸುಭಾಷ್ ಅವರ ಮಗ ಮತ್ತು ಬಿಜೆಪಿ ನಾಯಕ ಹರ್ಷಾನಂದ್ ಅವರೂ ಕೂಡ ಇದೇ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಅವರೂ ಕೂಡ ಆರೋಪವನ್ನು ನಿರಾಕರಿಸಿದ್ದಾರೆ.

Vote chori ವಿರುದ್ಧ ಬೃಹತ್ ಪ್ರತಿಭಟನೆ: ಪ್ರತಿ ಜಿಲ್ಲೆಯಿಂದ 300 ಮಂದಿ ಕರೆದೊಯ್ಯಲು ನಿರ್ಧಾರ; ಸರ್ವಪಕ್ಷ ಸಭೆ ಮುಂದೂಡಿಕೆ- ಡಿಕೆಶಿ
ಸಭೆಗೆ ವಿರೋಧ ಪಕ್ಷಗಳ ನಾಯಕರನ್ನು ಕರೆದುಕೊಂಡು ಹೋಗಲು ತೀರ್ಮಾನಿಸಿದ್ದೆವು. ಆದರೆ, ಅವರು ರಾಗ ಎಳೆಯುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಅವರ ಬಳಿ ಚರ್ಚೆ ನಡೆಸಿ ವಿರೋಧ ಪಕ್ಷದವರಿಗೆ ಸರಿಹೋಗುವ ದಿನಾಂಕದಂದು ಸಭೆ ನಿಗದಿ ಮಾಡುತ್ತೇವೆ.

ಬಿಹಾರದಲ್ಲಿ ನಡೆದದ್ದು ಮತಗಳ್ಳತನವಲ್ಲ, ಪ್ರಜಾಪ್ರಭುತ್ವದ ದರೋಡೆ: ಕಾಂಗ್ರೆಸ್
"ಇದು ಕೇವಲ ಮತ ಕಳ್ಳತನವಲ್ಲ, ಪ್ರಜಾಪ್ರಭುತ್ವದ ದರೋಡೆ", ಚುನಾವಣಾ ಆಯೋಗ ಬಿಜೆಪಿಯೊಂದಿಗೆ ಕೈಜೋಡಿಸಿದ್ದು, ಗೆಲುವಿಗೆ ನೆರವಾಗಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿಯವರು ಸುಳ್ಳಿನಲ್ಲಿ ಮಾತ್ರವಲ್ಲ ಮತಗಳ್ಳತನದಲ್ಲೂ ನಿಸ್ಸೀಮರು; ಚುನಾವಣಾ ಆಯೋಗ ಕೇಂದ್ರದ ಕೈಗೊಂಬೆ: ಸಿದ್ದರಾಮಯ್ಯ
ಕೇಂದ್ರ ಸರ್ಕಾರ ಸೂಚನೆಯಂತೆ ಕೆಲಸ ಮಾಡುತ್ತಿದೆ ಕೇಂದ್ರ ಹೇಳಿದ ಹಾಗೆ ಇವರು ಕೆಲಸ ಮಾಡುತ್ತಿದ್ದಾರೆ. ಸ್ವತಂತ್ರ ಸಂಸ್ಥೆಗಳನ್ನು ಮೋದಿ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಬಿಹಾರದಲ್ಲೂ ಮತಗಳ್ಳತನ: ರಕ್ಷಿಸುವ ಹೊಣೆ ಹೊತ್ತವರಿಂದಲೇ ಪ್ರಜಾಪ್ರಭುತ್ವದ ಕಗ್ಗೊಲೆ; ರಾಹುಲ್ ಗಾಂಧಿ ಆರೋಪ
ಸಂವಿಧಾನಕ್ಕೆ ದ್ರೋಹ ಮಾಡುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಚುನಾವಣಾ ಆಯುಕ್ತರಾದ ಸುಖ್‌ಬಿರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ಅವರೇ 'ಪ್ರಜಾಪ್ರಭುತ್ವದ ಕಗ್ಗೊಲೆ'ಯ ಪ್ರಮುಖ ದೋಷಿಗಳು ಎಂದು ದೂಷಿಸಿದ್ದಾರೆ.

ಚುನಾವಣಾ ಆಯೋಗ BJP ಅಂಗಸಂಸ್ಥೆಯಂತೆ ಕೆಲಸ ಮಾಡುತ್ತಿದೆ: ಸಚಿವ ಕೃಷ್ಣ ಬೈರೇಗೌಡ
ಚುನಾವಣಾ ಆಯೋಗ ಬಿಜೆಪಿಯ ಅಂಗಸಂಸ್ಥೆಯಂತೆ ಕೆಲಸ ಮಾಡುತ್ತಿದೆ. ಪರಿಣಾಮ ಇಡೀ ದೇಶದ ಚುನಾವಣಾ ಪ್ರಕ್ರಿಯೆಯೇ ಬುಡಮೇಲಾಗಿದೆ.

Vote Chori: SIT ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ; ಹಗರಣದಲ್ಲಿ ಭಾಗಿಯಾಗಿದ್ದ ಆರು ಮಂದಿ ಶಂಕಿತರ ಪತ್ತೆ!
ಮತಗಳ್ಳತನವನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಸರ್ಕಾರ, 'ವೋಟ್ ಚೋರಿ' ತನಿಖೆಗಾಗಿ ಎಸ್‌ಐಟಿಯನ್ನು ರಚಿಸಿತು. ಸಿಐಡಿಯಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಬಿಕೆ ಸಿಂಗ್ ಇದರ ನೇತೃತ್ವ ವಹಿಸಿದ್ದಾರೆ.

