ರಾಜ್ಯಬೆಂದ ಕಾಳೂರಿನ ಮಣ್ಣು ವಡ್ಡರ ಸ್ಮರಿಸುವ 'ನಮ್ಮ ಊರು ನಮ್ಮ ನೀರು' ಕಾವ್ಯ ಸಂಜೆ ಕಾರ್ಯಕ್ರಮ
ಭವಿಷ್ಯದಲ್ಲಿ ನೀರು ಬತ್ತಿಹೋಗುವ ಅಪಾಯವನ್ನು ಎದುರಿಸುತ್ತಿರುವ ಪ್ರಪಂಚದ 11 ನಗರಗಳಲ್ಲಿ ಬೆಂಗಳೂರು ಕೂಡಾ ಒಂದು. ನೀರಿನ ಸಂರಕ್ಷಣೆ ಕಾರ್ಯದಲ್ಲಿ ಕೈಯಿಂದ ಬಾವಿ ತೋಡುವ ಪ್ರಾಚೀನ ಪದ್ಧತಿ ನೆರವಾಗಬಲ್ಲುದು. ಈ ಪುಣ್ಯಕಾರ್ಯದಲ್ಲಿ ಆಪತ್ಬಾಂಧವರಾಗಿ ಒದಗಿಬಂದಿರುವ ಮಣ್ಣು ಒಡ್ಡರ ಸಮುದಾಯಕ್ಕೆ ಗೌರವ ಸಲ್ಲಿಸುತ್ತಿದೆ ಕವಯಿತ್ರಿ ಮಮತಾ ಸಾಗರ ಅವರ ಕಾವ್ಯ ಸಂಜೆ ತಂಡ.