ರಾಜ್ಯಮಲ್ಪೆ ಕಡಲತೀರದಲ್ಲಿ ತೇಲಿ ಬಂತು ರಾಶಿರಾಶಿ ಕಡಲ ತ್ಯಾಜ್ಯ!
ಮಲ್ಪೆ ಕಡಲತೀರದ ಉದ್ದಕ್ಕೂ ಅಪಾರ ಪ್ರಮಾಣದ ಕಡಲಮಡಿ (ಕಡಲ ತ್ಯಾಜ್ಯ) ತೇಲಿ ಬಂದಿದ್ದು, ಇದು ಸಮುದ್ರದಲ್ಲಿ ಮತ್ಸ್ಯ ಸಂಪತ್ತು ವೃದ್ಧಿಯ ಲಕ್ಷಣ ಎನ್ನಲಾಗುತ್ತಿದ್ದು, ಮೀನುಗಾರರಲ್ಲಿ ಸಂತಸವನ್ನು ಮೂಡಿಸಿದೆ. ಆದರೆ, ಈ ಜೈವಿಕ ಮೌಲ್ಯದ ಬಗ್ಗೆ ಅರಿವಿಲ್ಲದ ಕೆಲವರು ಸ್ವಚ್ಛಗೊಳಿಸುವಂತೆ ಅಧಿಕಾರಿಗಳ ವಿರುದ್ಧ ಕಿಡಿಕಾರಲು ಆರಂಭಿಸಿದ್ದಾರೆ.