ಮಠ

ವಿಜಯಪುರ ಪ್ರವೇಶಕ್ಕೆ ನಿರ್ಬಂಧ: DC ಆದೇಶ ಧಿಕ್ಕರಿಸಿ ಕನೇರಿ ಮಠಕ್ಕೆ ತೆರಳಿದ ಕಾಡಸಿದ್ದೇಶ್ವರ ಸ್ವಾಮೀಜಿ..!
ನೀವು ನನ್ನನ್ನು ಬಂಧಿಸಲು ಬಯಸಿದರೆ, ನನ್ನನ್ನು ಬಂಧಿಸಿ ನೀವು ಬಯಸಿದಷ್ಟು ಕಾಲ ಜೈಲಿನಲ್ಲಿಡಿ. ನಾನು ಜಾಮೀನಿಗೆ ಅರ್ಜಿ ಸಲ್ಲಿಸುವುದಿಲ್ಲ ಎಂದು ಹೇಳಿ ಮಠವನ್ನು ತೊರೆಯಲು ನಿರಾಕರಿಸಿದರು.

ನಾನು ಮಠದ ಹುಡುಗ, ಆದಿ ಚುಂಚನಗಿರಿ ಶ್ರೀ ಮಡಿಲಲ್ಲಿ ಬೆಳೆದವ: ಸಚಿವ ಜಮೀರ್ ಅಹ್ಮದ್ ಖಾನ್ | Video
ನಾನು ಮಠದ ಹುಡುಗ, ಆದಿ ಚುಂಚನಗಿರಿ ಮಠದಲ್ಲಿ ಬೆಳೆದಿದ್ದು ನಾನು. ಶೇಖರ್ ಸ್ವಾಮೀಜಿ ಬಳಿ ಕೇಳಲು ಹೇಳಿ, ಪ್ರತಿ ಶನಿವಾರ ನಾನು ಬೆಳಗ್ಗಿನಿಂದ ಸಂಜೆವರೆಗೂ ಮಠದಲ್ಲಿ ಇರುತ್ತೇನೆ. ನಾನು ಸ್ವಾಮೀಜಿ ಮಡಿಲಲ್ಲಿ ಬೆಳೆದವನು. ಇದನ್ನು ಕುಮಾರಸ್ವಾಮಿ ಅವರಲ್ಲಿಯೇ ಕೇಳಿ.

ಮಠಗಳು, ಆಧ್ಯಾತ್ಮಿಕ ಕೇಂದ್ರಗಳಿಗೆ ಸರ್ಕಾರ ಬೆಂಬಲ: ಲಕ್ಷ್ಮೀ ಹೆಬ್ಬಾಳ್ಕರ್
ಮಠ ಮಾನ್ಯಗಳನ್ನು ಬೆಳೆಸುವ ಸಂಸ್ಕೃತಿ ನಮ್ಮ ದೇಶದ್ದು, ಮಠಗಳನ್ನು ಬೆಳೆಸಿದರೆ ನಾವು ಉಳಿಯುತ್ತೇವೆ ಎನ್ನುವ ಸತ್ಯಾಂಶ ನನಗೆ ಗೊತ್ತಿದೆ ಎಂದು ಸಚಿವೆ ಲಕ್ಷ್ನೀ ಹೆಬ್ಬಾಳ್ಕರ್ ಅವರು ಭಾನುವಾರ ಹೇಳಿದರು.

ಮಠ ಚಿತ್ರದ ಟ್ರೈಲರ್
ಗುರು ಪ್ರಸಾದ್, ಸಾಧು ಕೋಕಿಲಾ ಅಭಿನಯದ ಮಠ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರವೀಂದ್ರ ವೆಂಶಿ ನಿರ್ದೇಶಿಸಿದ್ದಾರೆ.

ಶಿರೂರು ಮಠಕ್ಕೆ ಪೀಠಾಧಿಪತಿ ನೇಮಕ ವಿವಾದ: ಪಿಐಎಲ್ ವಜಾಗೊಳಿಸಿದ ಹೈಕೋರ್ಟ್
ಉಡುಪಿಯ ಶ್ರೀಕೃಷ್ಣ ಮಠದ ಅಷ್ಟಮಠಗಳ ಪೈಕಿ ಒಂದಾಗಿರುವ ಶ್ರೀ ಶಿರೂರು ಮಠಕ್ಕೆ 16 ವರ್ಷದ ಅಪ್ರಾಪ್ತರಿಗೆ ಮಠಾಧಿಪತಿಯಾಗಿ ಪಟ್ಟಾಭಿಷೇಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಬುಧವಾರ ವಜಾ ಮಾಡಿ ಆದೇಶಿಸಿದೆ.

ಮಠಾಧೀಶರುಗಳ ಶಕ್ತಿ ಪ್ರದರ್ಶನ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪರ ಸಮಾವೇಶ
ಮುಖ್ಯಮಂತ್ರಿ ಸ್ಥಾನಕ್ಕೆ ಬಿ ಎಸ್ ಯಡಿಯೂರಪ್ಪನವರು ರಾಜೀನಾಮೆ ನೀಡಬಾರದೆಂಬ ಒತ್ತಡ ಮಠಾಧೀಶರುಗಳಿಂದ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾವೇಶ ನಡೆದಿದ್ದು ಹಲವು ಮಠಾಧೀಶರುಗಳು ಭಾಗಿಯಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಮಠಗಳಲ್ಲಿ ಅಪ್ರಾಪ್ತರನ್ನು ಒತ್ತಾಯಪೂರ್ವಕವಾಗಿ ಸನ್ಯಾಸಿ ಮಾಡುತ್ತಿದ್ದರೂ ಸರ್ಕಾರ ಮೂಕ ಪ್ರೇಕ್ಷಕನಂತೆ ಕೂರುವಂತಿಲ್ಲ: ಹೈಕೋರ್ಟ್
ಮಠಗಳಲ್ಲಿ ಅಪ್ರಾಪ್ತರನ್ನು ಒತ್ತಾಯಪೂರ್ವಕವಾಗಿ ಸನ್ಯಾಸಿಗಳನ್ನಾಗಿಸುತ್ತಿದ್ದರೂ ಸರ್ಕಾರ ಮೂಕ ಪ್ರೇಕ್ಷಕನಂತೆ ಕೂರುವಂತಿಲ್ಲ. ಈ ಕುರಿತು ಪರಿಶೀಲನೆ ನಡೆಸಬೇಕೆಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ಮಠ ಮಾನ್ಯಗಳಿಗೆ ನೀಡಿರುವ ದೇಣಿಗೆ ವಾಪಸ್ ಕೇಳಿ, ಕೊರೋನಾ ಸಂಕಷ್ಟಕ್ಕೆ ಬಳಸಿಕೊಳ್ಳಿ: ವಿಶ್ವನಾಥ್ ಸಲಹೆ
ಕೋವಿಡ್ ಸಂಕಷ್ಟ ಸಮಯದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು, ಹೀಗಾಗಿ ಮಠ ಮಾನ್ಯಗಳಿಗೆ ನೂರಾರು ಕೋಟಿ ದೇಣಿಗೆ ನೀಡಿದ್ದೀರಿ, ಈ ಸಂದರ್ಭದಲ್ಲಿ ಹಣ ವಾಪಾಸ್ಸು ಕೇಳಿ ಎಂದು ಸಿಎಂ ಯಡಿಯೂರಪ್ಪ ಅವರಿಗೆ ಬಿಜೆಪಿ ಎಂಎಲ್ ಸಿ ಎಚ್.ವಿಶ್ವನಾಥ್ ಸಲಹೆ ನೀಡಿದ್ದಾರೆ.

ರಾಜ್ಯ ಬಜೆಟ್ 2021-2022: ಧಾರ್ಮಿಕ, ಮಠಗಳ ಅಭಿವೃದ್ಧಿಗಳಿಗೆ ಸಿಕ್ಕಿದೆಷ್ಟು?
ವಿವಿಧ ಧರ್ಮ, ಮಠಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ 2021-22ನೇ ಸಾಲಿನ ಬಜೆಟ್‌ನಲ್ಲಿ ಅನುದಾನಗಳನ್ನು ಪ್ರಕಟಿಸಿದ್ದಾರೆ,

