ದೇಶಬೇರೆ ಜಾತಿಯ ಯುವತಿಯೊಂದಿಗೆ ಮಗನ ವಿವಾಹಕ್ಕೆ ಸಿದ್ಧತೆ: ಜಾರ್ಖಂಡ್ ಕಾರ್ಮಿಕ ಸಚಿವಗೆ ಬುಡಕಟ್ಟು ಸಮುದಾಯ ಬಹಿಷ್ಕಾರ!
ಜಾರ್ಖಂಡ್ ರಾಜ್ಯದ ಕಾರ್ಮಿಕ ಸಚಿವ ಹಾಗೂ ಛತ್ರ ಕ್ಷೇತ್ರದ ಶಾಸಕ ಸತ್ಯಾನಂದ್ ಭೋಕ್ತಾ ಅವರನ್ನು ಅವರದೇ ಸಮುದಾಯದ ಮಂದಿ ಸಾಮಾಜಿಕವಾಗಿ ಬಹಿಷ್ಕಾರ ಹಾಕಿರುವ ಘಟನೆ ನಡೆದಿದೆ. ರಾಜಕೀಯ ಲಾಭಕ್ಕಾಗಿ ಸಮುದಾಯದ ಹೊರಗಿನ ಯುವತಿಯನ್ನು ಮಗನಿಗೆ ಮದುವೆ ಮಾಡಿಸಿದ್ದಾರೆ ಎಂದು ಅವರದೇ ಸಮುದಾಯವಾದ ಖೈರ್ವಾರ್ ಭೋಕ್ತ ಸಮಾಜ ವಿಕಾಸ ಸಂಘ ಸಾಮಾಜಿಕವಾಗಿ ಬಹಿಷ್ಕರಿಸಿದೆ.