ಮಕ್ಕಳ ಮಾರಾಟ

ದಾವಣಗೆರೆ: 4 ಲಕ್ಷಕ್ಕೆ ಮಗು ಮಾರಾಟ: ವೈದ್ಯೆ ಸೇರಿ 6 ಮಂದಿ ಬಂಧನ
ಜಯಾ ಹಾಗೂ ಪ್ರಶಾಂತ್ ದಂಪತಿಗೆ ಆ.26ರಂದು ಶಿಶು ಜನನವಾಗಿದೆ ಎಂಬುದಾಗಿ ದಾಖಲೆ ಸೃಷ್ಟಿಸಿರುವುದು ಕಂಡು ಬಂದಿತ್ತು.

ಲಕ್ಷ ಲಕ್ಷಕ್ಕೆ ಹಸುಗೂಸುಗಳ ಸೇಲ್: ಮಕ್ಕಳ ಮಾರಾಟ ಜಾಲ ಭೇದಿಸಿದ ಸಿಸಿಬಿ ಪೊಲೀಸರು; ತಮಿಳುನಾಡು ಮೂಲದ ನಾಲ್ವರ ಬಂಧನ
ರಾಜಧಾನಿ ಬೆಂಗಳೂರಲ್ಲಿ ಸದ್ದಿಲ್ಲದೇ ಮಕ್ಕಳ ಮಾರಾಟ ಜಾಲವು ಶುರುವಾಗಿದ್ಯಾ? ಇಂತಹದೊಂದು ಪ್ರಶ್ನೆ ಸಹಜವಾಗಿ ಕಾಡುತ್ತಿದೆ. ಹೆತ್ತವರ ಮಡಿಲಿನಲ್ಲಿ ಬೆಚ್ಚಗೆ ಮಲಗಿರುವ ಹಸುಗೂಸುಗಳನ್ನು ಕದ್ದು ಮಾರಾಟ ಮಾಡುವ ಜಾಲವೊಂದನ್ನು ಸಿಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನದಲ್ಲಿ ಕುಟುಂಬ ನಿರ್ವಹಣೆಗೆ ಸ್ವಂತ ಮಕ್ಕಳ ಮಾರಾಟ
ಕಾಬೂಲ್ ನಲ್ಲಿ ಮಹಿಳೆಯೊಬ್ಬರು, ತನ್ನ ಹಸುಗೂಸನ್ನು 37 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾಳೆ. ಈ ಬಗ್ಗೆ ಪ್ರಶ್ನಿಸಿದರೆ, ಉಳಿದವರ ಪ್ರಾಣ ಉಳಿಬೇಕಂದ್ರೆ ಈ ಮಗು ಮಾರಾಟ ಮಾಡಲೇಬೇಕಿತ್ತು ಎಂದು ಅಸಹಾಯಕತೆ ತೋರ್ಪಡಿಸಿಕೊಂಡಿದ್ದಾಳೆ.

ಬಡವರಿಂದ ಮಕ್ಕಳು ಖರೀದಿಸಿ ಶ್ರೀಮಂತರಿಗೆ ಮಾರಾಟ ಮಾಡುತ್ತಿದ್ದವರ ಬಂಧನ
ಮಕ್ಕಳಾಗದ ದಂಪತಿಗೆ ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಕೊಡಿಸುತ್ತೇವೆ ಎಂದು ಹೇಳಿ ಲಕ್ಷಾಂತರ ರೂ ಹಣ ಪಡೆದು ವಂಚಿಸುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಉಡುಪಿಯಲ್ಲಿ ಹೃದಯ ವಿದ್ರಾವಕ ಘಟನೆ: ಮಕ್ಕಳ ಮಾರಾಟಕ್ಕೆ ಮುಂದಾಗಿದ್ದ ತಂದೆಯಿಂದ ರಕ್ಷಿಸಿದ ಅಧಿಕಾರಿಗಳು
ಮಂಗಳೂರು ಮೂಲದ ದಂಪತಿಗೆ ತನ್ನಿಬ್ಬರು ಮಕ್ಕಳನ್ನು ಮಾರಾಟ ಮಾಡಲು ಯತ್ನಿಸಿದ್ದ ವ್ಯಕ್ತಿಯಿಂದ ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಕ್ಕಳನ್ನು ಕಾಪಾಡಿದ್ದಾರೆ.

ಮಡಿಕೇರಿ: ಅಪ್ರಾಪ್ತೆಗೆ ಹೆರಿಗೆ ಮಾಡಿಸಿ ಮಗು ಮಾರಾಟ ಮಾಡಿದ ವೈದ್ಯ ದಂಪತಿ!
ಹಣದಾಸೆಗೆ ವೈದ್ಯರೇ ಅಪ್ರಾಪ್ತ ಯುವತಿಗೆ ಹೆರಿಗೆ ಮಾಡಿಸಿದ್ದಲ್ಲದೆ ಮಗುವನ್ನು ಮಾರಾಟ ಮಾಡಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ವರದಿಯಾಗಿದೆ.

ಹೆತ್ತ ಮಗಳನ್ನೇ ಮಾರಾಟ ಮಾಡಿ, ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುವಂತೆ ಪತ್ರ ಬರೆದುಕೊಟ್ಟ ತಂದೆತಾಯಿ!
ಹಣದ ಆಸೆಗೆ ವಿವಾಹದ ಹೆಸರಿನಲ್ಲಿ ಅಪ್ರಾಪ್ತ ಮಗಳನ್ನು ಹೆತ್ತವರೇ ಮಾರಾಟ ಮಾಡಿದ್ದು, 10 ವರ್ಷಗಳ ಕಾಲ ಯಾರೂ ಬೇಕಾದರೂ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳಬಹುದು ಎಂದು ಕರಾರುಪತ್ರ ಬರೆದುಕೊಟ್ಟ ದಾರುಣ ಘಟನೆಯೊಂದು ಬೆಳಕಿಗೆ ಬಂದಿದೆ.

ಕಲಬುರ್ಗಿ: ಹಣದಾಸೆಗೆ 20 ದಿನಗಳ ಹಸುಗೂಸನ್ನು ಮಾರಾಟ ಮಾಡಿದ ತಾಯಿ!
ಹೆತ್ತ ತಾಯಿಯೇ ತನ್ನ 20ದಿನಗಳ ಕಂದನನ್ನು ಹಣದಾಸೆಗೆ ಇನ್ನೊಬ್ಬ ಮಹಿಳೆಗೆ ಮಾರಾಟ ಮಾಡಿರುವ ಘಟನೆ ಕಲಬುರ್ಗಿಯಲ್ಲಿ ಬೆಳಕಿಗೆ ಬಂದಿದೆ.

ಪಾಕ್ ಬುಡಕಟು ನ್ಯಾಯಾಲಯ ವಿಧಿಸಿದ ದಂಡ ಪಾವತಿಸಲು ಮಕ್ಕಳನ್ನೇ ಮಾರಾಟಕ್ಕಿಟ್ಟ!
ಪಾಕಿಸ್ತಾನದ ಬುಡಕಟ್ಟು ನ್ಯಾಯಾಲಯ ವಿಧಿಸಿರುವ ದಂಡ ಪಾವತಿ ಮಾಡಲು ವ್ಯಕ್ತಿಯೊಬ್ಬ ತನ್ನ ನಾಲ್ಕು ಮಕ್ಕಳನ್ನು 1 .6 ಮಿಲಿಯನ್ ಬೆಲೆಗೆ ಮಾರಾಟಕ್ಕಿಟ್ಟಿದ್ದಾನೆ.

