ಮಕ್ಕಳ ಅಪಹರಣ

ಮಕ್ಕಳ ನಾಪತ್ತೆ-ಕಳ್ಳಸಾಗಣೆ ಪತ್ತೆಗೆ ವಿಶೇಷ ಕಾರ್ಯಪಡೆ ರಚನೆ
ರಾಜ್ಯದಲ್ಲಿ ಹಲವಾರು ಮಕ್ಕಳನ್ನು ಅಪಹರಿಸುವ ಮತ್ತು ಕಾಣೆಯಾಗುವ ಪ್ರಕರಣಗಳು ವರದಿಯಾಗಿವೆ. ಅಂತಹ ಪ್ರಕರಣಗಳು ಮಕ್ಕಳ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಬೆಳಗಾವಿ ಮಕ್ಕಳ ಮಾರಾಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಭ್ರೂಣಹತ್ಯೆಯಲ್ಲಿ ತೊಡಗಿದ್ದ ನಕಲಿ ವೈದ್ಯ, ತನಿಖೆಯಲ್ಲಿ ಬಯಲು!
ಬೆಳಗಾವಿಯ ಕಿತ್ತೂರಿನಲ್ಲಿ ನಡೆದ ಮಕ್ಕಳ ಮಾರಾಟ ಪ್ರಕರಣದ ನಕಲಿ ವೈದ್ಯನ ಮತ್ತೊಂದು ಕರಾಳಮುಖ ಬಯಲಾಗಿದೆ. ಭ್ರೂಣಹತ್ಯೆ ಮಾಡಿ ಅವುಗಳನ್ನು ತೋಟದಲ್ಲಿ ಹೂತಿಟ್ಟಿದ್ದ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ನಿತ್ಯಾನಂದ ವಿರುದ್ಧ ಕೇಸ್ ದಾಖಲು, ಮಕ್ಕಳನ್ನು ಅಪಹರಿಸಿದ ಇಬ್ಬರು ಶಿಷ್ಯರ ಬಂಧನ
ಮಕ್ಕಳನ್ನು ಅಪಹರಿಸಿದ ಹಾಗೂ ಅಕ್ರಮ ಬಂಧನದಲ್ಲಿಟ್ಟುಕೊಂಡಿದ್ದ ಆರೋಪದ ಮೇಲೆ ಸ್ವಯಂ ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ವಿರುದ್ಧ ಎಫ್ ಐಆರ್ ದಾಖಲಿಸಿರುವುದಾಗಿ ಗುಜರಾತ್ ಪೊಲೀಸರು ಬುಧವಾರ ತಿಳಿಸಿದ್ದಾರೆ.

ಚಾಮರಾಜಪೇಟೆ ಯುವಕನ ಹತ್ಯೆ ಪ್ರಕರಣ: ಇಬ್ಬರು ಅಪ್ರಾಪ್ತರು ಸೇರಿ 14 ಮಂದಿಯ ಬಂಧನ
ಮಕ್ಕಳ ಕಳ್ಳನೆಂದು ಭಾವಿಸಿ ರಾಜಸ್ಥಾನದ ಮೂಲದ ಯುವಕನನ್ನು ಸ್ಥಳೀಯರು ಹೊಡೆದು ಕೊಂದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜಪೇಟೆ ಪೊಲೀಸರು 14 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಚಾಮರಾಜಪೇಟೆ ಯುವಕನ ಹತ್ಯೆ: ವದಂತಿ ಹಬ್ಬಿಸಬೇಡಿ ಎಂದು ಡಿಸಿಪಿ ರವಿ ಡಿ ಚೆನ್ನಣ್ಣವರ್ ಮನವಿ
ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಕಳ್ಳತನ ಕುರಿತು ಸುಳ್ಳು ಸುದ್ದಿ ಅಥವಾ ವದಂತಿ ಹಬ್ಬಿಸಬೇಡಿ ಎಂದು ಡಿಸಿಪಿ ರವಿ ಡಿ ಚೆನ್ನಣ್ಣವರ್ ಹೇಳಿದ್ದಾರೆ.

ಗಾಳಿ ಸುದ್ದಿ ನಂಬಿ ಪೋಷಕರ ಆತಂಕ, ಅಮಾಯಕರ ಮೇಲೆ ಹಲ್ಲೆ!
ಮಕ್ಕಳ ಕಳ್ಳರು ರಾಜ್ಯಕ್ಕೆ ಆಗಮಿಸಿದ್ದು, ಮಕ್ಕಳ ಅಂಗಾಂಗಗಳನ್ನು ಕಿತ್ತು ಮಾರುತ್ತಿದ್ದಾರೆ ಎಂಬ ಗಾಳಿಸುದ್ದಿ ಇದೀಗ ಪೋಷಕರ ಆತಂಕಕ್ಕೆ ಕಾರಣವಾಗಿದ್ದು, ಇದೇ ಆತಂಕ ಇದೀಗ ಒಂದು ಅಮಾಯಕ ಜೀವವನ್ನು ಬಲಿತೆಗೆದುಕೊಂಡಿದೆ.

ಚಾಮರಾಜಪೇಟೆಯಲ್ಲಿ ಮಕ್ಕಳ ಕಳ್ಳನೆಂದು ಭಾವಿಸಿ ಸಾರ್ವಜನಿಕರಿಂದ ಯುವಕನ ಮೇಲೆ ಹಲ್ಲೆ, ಕೊಲೆ!
ಕೆಲಸ ಅರಸಿ ಬಂದಿದ್ದ ಯುವಕನೋರ್ವನನ್ನು ಮಕ್ಕಳ ಕಳ್ಳನೆಂದು ಭಾವಿಸಿ ಮನುಷ್ಯತ್ವವನ್ನೇ ಮರೆತ ಬೆಂಗಳೂರು ನಿವಾಸಿಗಳು ಮನಬಂದಂತೆ ಥಳಿಸಿ ಕೊಂದು ಹಾಕಿರುವ ಆತಂಕಕಾರಿ ಘಟನೆ ನಡೆದಿದೆ.

ನಗರದಲ್ಲಿ ನಾಪತ್ತೆಯಾಗುವ ಪ್ರತೀ 2 ಮಕ್ಕಳ ಪೈಕಿ 1 ಮಗು ಪತ್ತೆಯೇ ಆಗುವುದಿಲ್ಲ!
ನಗರದ ಪೊಲೀಸರು ಎಷ್ಟೇ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಮಕ್ಕಳ ಅಪಹರಣದಂತಹ ಪ್ರಕರಣಗಳು ಮಾತ್ರ ಹೆಚ್ಚಾಗುತ್ತಲೇ ಇವೆ. ಇದಕ್ಕೆ ಸಂಬಂಧಪಟ್ಟಂತೆ ಆತಂಕ ಸೃಷ್ಟಿಸುವ ವರದಿಯೊಂದು ಇದೀಗ ಹೊರಬಿದ್ದಿದ್ದು...

