ರಾಜಕೀಯ'ಹಾಲಲ್ಲಾದರು ಹಾಕು,ನೀರಲ್ಲಾದರು ಹಾಕು, ಏನು ಮಾಡಬೇಕೊ ಅಂತಿದೆಯೊ ಅದನ್ನು ಮಾಡು ತಂದೆ ಎಂದು ರಾಯರಲ್ಲಿ ಕೇಳಿಕೊಂಡಿದ್ದೇನೆ': ಅನಿತಾ ಕುಮಾರಸ್ವಾಮಿ
ಹಾಸನದಲ್ಲಿ ಜೆಡಿಎಸ್ ಟಿಕೆಟ್ ನೀಡಿಕೆ ವಿಚಾರವಾಗಿ ಹೆಚ್ ಡಿ ದೇವೇಗೌಡರ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗಿರುವುದು ಬಹಿರಂಗವಾಗಿರುವಾಗಿರುವುದರ ಮಧ್ಯೆ ಇಂದು ಭಾನುವಾರ ಹೆಚ್ ಡಿ ಕುಮಾರಸ್ವಾಮಿ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿಯವರ ಜೊತೆಗೆ ಮಂತ್ರಾಲಯ ಶ್ರೀ ಗುರು ರಾಘವೇಂದ್ರದ ದರ್ಶನ ಪಡೆದರು.