ಮಂಗಳೂರು ಗೋಲಿಬಾರ್

ಮಂಗಳೂರಿನಲ್ಲಿ ಪೊಲೀಸ್ ಗೋಲಿಬಾರ್: ನ್ಯಾಯಾಂಗ ತನಿಖೆ ವರದಿ ಸರ್ಕಾರಕ್ಕೆ ಸಲ್ಲಿಕೆ
ನಗರದಲ್ಲಿ ಕಳೆದ ವರ್ಷ ಡಿಸೆಂಬರ್ 19 ರಂದು ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿ ಪ್ರತಿಭಟನೆ ವೇಳೆ ನಡೆದ ಪೊಲೀಸ್ ಗೋಲಿಬಾರ್ ಕುರಿತು ನ್ಯಾಯಾಂಗ ತನಿಖೆಯ ನೇತೃವವನ್ನು ವಹಿಸಿದ್ದ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಅವರು ಶನಿವಾರ ಅಂತಿಮ ತನಿಖಾ ವರದಿಯನ್ನು ರಾಜ್ಯ ಗೃಹ ಇಲಾಖೆಗೆ ಸಲ್ಲಿಸಿದ್ದಾರೆ.

ಮಂಗಳೂರು ಗೋಲಿಬಾರ್: ಸೆ 1 ರಂದು ನ್ಯಾಯಾಂಗ ವಿಚಾರಣೆ
ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿ ಪ್ರತಿಭಟನೆ ವೇಳೆ ಇಬ್ಬರು ಸಾವನ್ನಪ್ಪಿದ ಪೊಲೀಸ್ ಗೋಲಿಬಾರ್ ಕುರಿತು ಸೆ 1 ರಂದು ವಿಚಾರಣೆ ನಡೆಯಲಿದೆ.

ಮಂಗಳೂರಿನಲ್ಲಿ ಗಲಭೆ ವಿಚಾರಣೆಗೆ ಸದನ ಸಮಿತಿ ರಚಿಸುವ ಅಗತ್ಯವಿಲ್ಲ: ಬಸವರಾಜ ಬೊಮ್ಮಾಯಿ
ಮಂಗಳೂರಿನಲ್ಲಿ ಗಲಭೆ ವಿಚಾರಣೆಗೆ ಸದನ ಸಮಿತಿ ರಚಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಬಸವಾಜ ಬೊಮ್ಮಯಿ ಸ್ಪಷ್ಟಪಡಿಸಿದ್ದಾರೆ.

ಮಂಗಳೂರು ಗೋಲಿಬಾರ್: ದೂರು ಸ್ವೀಕಾರದ ಕುರಿತು ವರದಿ ನೀಡಿ - ಸರ್ಕಾರಕ್ಕೆ ಹೈಕೋರ್ಟ್ ಆದೇಶ
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ನಡೆಸಿದ ಗೋಲಿಬಾರ್ ಕುರಿತು ಸಲ್ಲಿಕೆಯಾಗಿರುವ ದೂರುಗಳು, ಅವುಗಳ ಬಗ್ಗೆ ಕೈಗೊಂಡಿರುವ ಕ್ರಮಗಳ ಮಾಹಿತಿ ನೀಡುವಂತೆ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಮಂಗಳೂರು ಗೋಲಿಬಾರ್: ಎಲ್ಲೆ ಮೀರಿದ ಪೊಲೀಸರು, ನ್ಯಾಯಾಂಗ ತನಿಖೆ ಕೋರಿದ ಪೀಪಲ್ಸ್ ಟ್ರಿಬ್ಯುನಲ್
ಕೇಂದ್ರ ಸರ್ಕಾರದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ಎಲ್ಲೆ ಮೀರಿ ನಡೆದುಕೊಂಡಿದ್ದು, ಈ ಕುರಿತು ನ್ಯಾಯಾಂಗ ತನಿಖೆಯ ಅಗತ್ಯ ಇದೆ...

ತಿರುಚಿದ ವಿಡಿಯೋ ಬಿಡುಗಡೆ; ಸಾಕ್ಷ್ಯ, ದಾಖಲೆಗಳಿದ್ದರೆ ತನಿಖಾ ಸಮಿತಿಗೆ ಸಲ್ಲಿಸಿ: ಹೆಚ್'ಡಿಕೆಗೆ ಬೊಮ್ಮಾಯಿ
ಮಂಗಳೂರು ಗೋಲಿಬಾರ್'ಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಿಡುಗಡೆ ಮಾಡಿರುವ ವಿಡಿಯೋವನ್ನು ತಿರುಚಿಸಲಾಗಿದೆ. ಒಬ್ಬ ಮಾಜಿ ಮುಖ್ಯಮಂತ್ರಿ ಪೊಲೀಸರ ಮೇಲೆಯೇ ತಪ್ಪು ಹೊರಿಸಲು ಮುಂದಾಗಿರುವುದು ಬೇಜವಾಬ್ದಾರಿ ನಡವಳಿಕೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.

ಮಂಗಳೂರು ಘಟನೆ: ಸದನ ಸಮಿತಿ ರಚನೆಗೆ ಎಚ್.ಡಿ. ಕುಮಾರಸ್ವಾಮಿ ಒತ್ತಾಯ
ತೋಳಚಂದ್ರ ಗ್ರಹಣಕ್ಕಿಂತಲೂ ರಾಜಕೀಯಕ್ಕೆ ಹಿಡಿದಿರುವ ಗ್ರಹಣ ಮತ್ತು ರಾಜಕೀಯದಲ್ಲಿ ಬಲಿತಿರುವ ತೋಳಗಳು ಬಹಳ ಅಪಾಯಕಾರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರು ಗೋಲಿಬಾರ್ ಘಟನೆ: ಮ್ಯಾಜಿಸ್ಟೇಟ್ ತನಿಖೆ ಆರಂಭ
ಇಬ್ಬರನ್ನು ಬಲಿ ಪಡೆದ ಮಂಗಳೂರು ಗೋಲಿಬಾರ್, ಹಿಂಸಾಚಾರ ಘಟನೆಗೆ ಸಂಬಂಧಿಸಿದಂತೆ ಸೋಮವಾರ ಮ್ಯಾಜಿಸ್ಟೇಟ್ ತನಿಖೆ ಆರಂಭವಾಗಿದೆ.

ಮಂಗಳೂರು ಗೋಲಿಬಾರ್: ಮೃತರ ಕುಟುಂಬಕ್ಕೆ ಟಿಎಂಸಿಯಿಂದ ಪರಿಹಾರ ವಿತರಣೆ
ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಸಮಯದಲ್ಲಿ ಪೊಲೀಸರು ನಡೆಸಿದ ಗೋಲಿಬಾರ್ ನಿಂದ ಮೃತಪಟ್ಟವರ ಕುಟುಂಬಕ್ಕೆ ತೃಣಮೂಲ ಕಾಂಗ್ರೆಸ್ ಶನಿವಾರ ಪರಿಹಾರದ ಚೆಕ್ ವಿತರಣೆ ಮಾಡಿದೆ.

