ದೇಶಶಿವಸೇನೆ ಮುಖಂಡ, ಸಂಸದ ಸಂಜಯ್ ರಾವತ್ 4 ದಿನ ಇಡಿ ಕಸ್ಟಡಿಗೆ
ಭೂ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತ ಶಿವಸೇನಾ ಸಂಸದ ಸಂಜಯ್ ರಾವತ್ ಅವರನ್ನು ನಾಲ್ಕು ದಿನಗಳ ಕಾಲ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಒಪ್ಪಿಸಲಾಗಿದೆ. ತನಿಖಾ ಸಂಸ್ಥೆ ಇಡಿ ಎಂಟು ದಿನಗಳ ಕಸ್ಟಡಿಗೆ ಕೇಳಿತ್ತು. ಆದರೆ ಮುಂಬೈ ವಿಶೇಷ ನ್ಯಾಯಾಲಯ 4 ದಿನ ಕಸ್ಟಡಿಗೆ ನೀಡಿತು.