ಭೂಮಿ ಒತ್ತುವರಿ

HDK ವಿರುದ್ದ ಭೂ ಒತ್ತುವರಿ ಆರೋಪ: BJP ಮೌನದ ವಿರುದ್ಧ ಕಾಂಗ್ರೆಸ್ ಕಿಡಿ
ಸಿಎಂ ಪತ್ನಿಗೆ ಮುಡಾ ಕೊಟ್ಟಿರುವ 14 ನಿವೇಶನಗಳ ವಿಚಾರವಾಗಿ ದೊಡ್ಡ ಆಂದೋಲನವನ್ನೇ ಬಿಜೆಪಿ ನಡೆಸಿತ್ತು. ಈಗ ಎಚ್ ಡಿ ಕುಮಾರಸ್ವಾಮಿ ಅವರ ಕುಟುಂಬ ಸರ್ಕಾರಿ ಜಮೀನನ್ನ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದಾಖಲೆ ಹೇಳುತ್ತಿದೆ. ಈಗೇಕೆ ಧ್ವನಿ ಎತ್ತುತ್ತಿಲ್ಲ.

ಒತ್ತುವರಿಯಾದ ಸರ್ಕಾರಿ ಭೂಮಿಗಳ ಪಟ್ಟಿ ಮಾಡಿ: ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚನೆ
ಸರ್ಕಾರಿ ಒತ್ತುವರಿ ಜಮೀನುಗಳ ಪ್ರಾಥಮಿಕ ಒತ್ತುವರಿ ಪಟ್ಟಿಯನ್ನು ಶೀಘ್ರದಲ್ಲಿ ತಯಾರಿಸಿ ಹಾಗೂ ಪ್ರತೀ ವಾರಾಂತ್ಯದಲ್ಲಿ ಒತ್ತುವರಿ ತೆರವಿಗೆ ಮುಂದಾಗಿ ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೋಮವಾರ ಸೂಚನೆ ನೀಡಿದ್ದಾರೆ.

ಬಿಡಿಎ ಅನುಮೋದಿತ ಲೇಔಟ್‌ನಲ್ಲಿ ಭೂಮಿ ಒತ್ತುವರಿ ಮಾಡಿಕೊಂಡಿದ್ದ ಮಾಜಿ ಕಾರ್ಪೊರೇಟರ್ ಬಂಧನ
ಬಿಡಿಎ ಅನುಮೋದಿತ ಐಟಿಐ ಲೇಔಟ್‌ನಲ್ಲಿ ನಾಗರಿಕ ಸೌಲಭ್ಯ (ಸಿಎ) ಉದ್ದೇಶಕ್ಕಾಗಿ ಮೀಸಲಿಟ್ಟಿದ್ದ ಹಲವು ನಿವೇಶನಗಳನ್ನು ಒತ್ತುವರಿ ಮಾಡಿಕೊಂಡಿದ್ದಷ್ಟೇ ಅಲ್ಲದೆ, ಸುತ್ತಮುತ್ತಲಿನ ಸಾರ್ವಜನಿಕ ರಸ್ತೆಗಳಲ್ಲಿ ಕಾಂಪೌಂಡ್ ಗೋಡೆಗಳನ್ನು ನಿರ್ಮಿಸಿ ತೊಂದರೆ ನೀಡುತ್ತಿದ್ದ ಆರೋಪದ ಮೇಲೆ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ಬುಧವಾರ ಮಾಜಿ ಕಾರ್ಪೊರೇಟರ್ ಜಗದೀಶ್ ಎಂ ಆರ್

1.3 ಲಕ್ಷ ಎಕರೆ ಭೂಮಿ ಒತ್ತುವರಿ ತೆರವುಗೊಳಿಸಲಾಗುವುದು: ಕಂದಾಯ ಸಚಿವ ಆರ್ ಅಶೋಕ್
‘ನವೆಂಬರ್‌ವರೆಗೆ 2.7 ಲಕ್ಷ (2,70,108) ಎಕರೆ ಸರ್ಕಾರಿ ಭೂಮಿ ಒತ್ತುವರಿ ತೆರವು ಮಾಡಲಾಗಿದ್ದು, 1.36 ಲಕ್ಷ ಎಕರೆ (1,36,109) ಭೂಮಿ ತೆರವು ಬಾಕಿ ಉಳಿದಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಬುಧವಾರ ಮಾಹಿತಿ ನೀಡಿದರು.

ನೀರಿದ್ದ ಜಾಗದಲ್ಲಿ ಕಾಂಕ್ರೀಟ್ ಕಾಡು...!
ನಗರಕ್ಕೆ ಹತ್ತಿರುವಿರುವ ದಕ್ಷಿಣ ತಾಲೂಕಿನಲ್ಲಿ ಭೂಮಿಯ ಜಾಗಕ್ಕೆ ಚಿನ್ನದ ಬೆಲೆ ಇದೆ. ಇಲ್ಲಿ ಒಂದು ಎಕರೆ ಹೊಂದುವುದು ಒಂದೇ, ಹೊರ ವಲಯದಲ್ಲಿ 10 ಎಕರೆ ಹೊಂದುವುದೂ ಒಂದೇ. ಹೀಗಿರುವಾಗ ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ...

ರು.412.90 ಕೋಟಿ ಮೌಲ್ಯದ 91.30 ಎಕರೆ ಭೂಮಿ ವಶ
ಒತ್ತುವರಿ ತೆರವು ಮುಂದುವರಿಸಿರುವ ಜಿಲ್ಲಾಡಳಿತ ರು.412.90 ಕೋಟಿ ಮೌಲ್ಯದ 91.30 ಎಕರೆ ಭೂಮಿ ವಶಪಡಿಸಿಕೊಂಡಿದೆ...

ಕೆರೆ ಒತ್ತುವರಿ ತೆರವು ತೋರಣ
ಪೂರ್ವ ತಾಲೂಕಿನ ಕಾಡುಗೋಡಿ ಪ್ಲಾಂಟೇಷನ್, ಬಾಣಸವಾಡಿ ಕೆರೆ ಹಾಗೂ ಆನೇಕಲ್ ನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡ ನಗರ ಜಿಲ್ಲಾಡಳಿತ ರು.7551 ಕೋಟಿ ಮೌಲ್ಯದ 750.30 ಎಕರೆ ಭೂಮಿ ವಶಪಡಿಸಿಕೊಂಡಿದೆ...

ಗುಂಡೂರಾವ್ ವಿರುದ್ಧದ ಭೂ ಒತ್ತುವರಿ ಆರೋಪ ಸಾಬೀತು
ರಾಜ್ಯದ ಪ್ರಭಾವಿ ಸಚಿವರೊಬ್ಬರು ಸರ್ಕಾರಿ ಸ್ವಾಮ್ಯದ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ..

