ರಾಜ್ಯಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ಮತ್ತೆ ಸುಗ್ರೀವಾಜ್ಞೆ ಅಧಿಸೂಚನೆ ಪ್ರಕಟ
ವಿವಾದಾತ್ಮಕ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗೆ ರಾಜ್ಯ ಸರ್ಕಾರ ಮತ್ತೆ ಸುಗ್ರೀ ವಾಜ್ಞೆ ಹೊರಡಿಸಿದ್ದು, ನೀರಾವರಿ ಜಮೀನನ್ನು ಕೃಷಿಯೇತರ ಚಟುವಟಿಕೆಗಳಿಗೆ ಖರೀದಿಸದಂತೆ ಹಾಗೂ ಎಸ್ಸಿ ಎಸ್ಟಿ ಸಮುದಾಯದ ಜಮೀನನ್ನು ಯಾವುದೇ ಉದ್ದೇಶಕ್ಕೆ ಬಳಸಲು ಅವಕಾಶ ನೀಡದಂತೆ ಸುಗ್ರೀವಾಜ್ಞೆಯಲ್ಲಿ ಅಧಿಸೂಚಿಸಲಾಗಿದೆ.