ದೇಶಭೀಮಾ ಕೋರೆಗಾಂವ್ ಕೇಸ್: ಸಾಮಾಜಿಕ ಕಾರ್ಯಕರ್ತ ನವ್ಲಾಖಾಗೆ ಗೃಹಬಂಧನ ತಪ್ಪು ನಿದರ್ಶನ- ಸುಪ್ರೀಂ ಕೋರ್ಟ್
ಭೀಮಾ ಕೋರೆಗಾಂವ್-ಎಲ್ಗಾರ್ ಪರಿಷತ್-ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತ ಗೌತಮ್ ನವ್ಲಾಖಾ ಅವರನ್ನು ಗೃಹಬಂಧನದಲ್ಲಿ ಇರಿಸಿರುವುದು ತಪ್ಪು ನಿದರ್ಶನವಾಗಲಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ಅಲ್ಲದೇ, ಅವರ ಪ್ರಸ್ತುತ ಆರೋಗ್ಯ ಪರಿಸ್ಥಿತಿ ಮತ್ತು ವಿಚಾರಣೆಯ ಹಂತವನ್ನು ತಿಳಿಸುವಂತೆ ರಾಷ್ಟ್ರೀಯ ತನಿಖಾ ಆಯೋಗಕ್ಕೆ ನಿರ್ದೇಶನ ನೀಡಿದೆ.