ದೇಶಮನ್ ಕಿ ಬಾತ್: ಭಾರತೀಯ ಹಬ್ಬಗಳನ್ನು ಜನಪ್ರಿಯಗೊಳಿಸಿ- ಜನತೆಗೆ ಪ್ರಧಾನಿ ಮೋದಿ
ದೇಶದಾದ್ಯಂತ ಇಂದು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಉತ್ಸವದ ಪ್ರವಾಸೋದ್ಯಮ ನಡಿಸಿ, ನಮ್ಮ ಹಬ್ಬಗಳನ್ನು ಜನಪ್ರಿಯಗೊಳಿಸಿ ಮತ್ತು ಇತರೆ ರಾಜ್ಯ ಹಾಗೂ ಇತರೆ ದೇಶಗಳ ಜನರನ್ನು ಆಹ್ವಾನಿಸಿ ಅವರೊಂದಿಗೆ ಹಬ್ಬವನ್ನು ಆಚರಿಸಿ ಎಂದು ಪ್ರಧಾನಿ ಮೋದಿಯವರು ಭಾನುವಾರ ಹೇಳಿದ್ದಾರೆ.