ದೇಶಡೇಟಾ ಸಂರಕ್ಷಣಾ ಮಸೂದೆಯಿಂದ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಪ್ರತಿಕೂಲ ಪರಿಣಾಮ: ಭಾರತೀಯ ಸಂಪಾದಕರ ಕೂಟ
ಕೇಂದ್ರ ಸರ್ಕಾರದ ಪ್ರಸ್ತಾವಿತ ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆ ಹಾಗೂ ನಿಯತಕಾಲಿಕಗಳ ಮುದ್ರಣ ಹಾಗೂ ನೋಂದಣಿ ಮಸೂದೆಯು ಮಾಧ್ಯಮಗಳ ಸ್ವಾತಂತ್ರ್ಯದ ಮೇಲೆ ಗಂಭೀರ ಪರಿಣಾಮ ಬೀರಲಿವೆ ಎಂದು ಭಾರತೀಯ ಸಂಪಾದಕರ ಕೂಟ ಭಾನುವಾರ ಆತಂಕ ವ್ಯಕ್ತಪಡಿಸಿದೆ.