ದೇಶಕೊರೋನಾ ಎಫೆಕ್ಟ್: ಪ್ರಯಾಣಿಕರಿಲ್ಲದೆ 167 ನೇ ವಾರ್ಷಿಕೋತ್ಸವ ಆಚರಿಸಿಕೊಂಡ ಭಾರತೀಯ ರೈಲ್ವೆ
ಭಾರತೀಯ ರೈಲ್ವೆ ಗುರುವಾರ 167 ನೇ ವರ್ಷಕ್ಕೆ ಕಾಲಿಟ್ಟಿದೆ. ಆದರೆ ಒಂದೂವರೆ ಶತಮಾನದಷ್ಟು ಇತಿಹಾಸವಿರುವ ರೈಲ್ವೆ ಮೊದಲ ಬಾರಿಗೆ ತನ್ನ ಸೇವಾ ಪ್ರಾರಂಭೋತ್ಸವ ದಿನವನ್ನು ಯಾವೊಬ್ಬ ಪ್ರಯಾಣಿಕ ರೈಲು ಸಂಚಾರವಿಲ್ಲದೆ ಆಚರಿಸಿಕೊಂಡಿದೆ. ದೇಶಾದ್ಯಂತ ಲಾಕ್ಡೌನ್ ಇರುವ ಕಾರಣ ಭಾರತದಲ್ಲಿ ಗೂಡ್ಸ್ ರೈಲುಗಳು ಮಾತ್ರವೇ ಸಂಚಾರ ನಡೆಸಿದೆ.