ದೇಶಮಹಾಮಾರಿ ಕೊರೋನಾಗೆ ದೆಹಲಿಯಲ್ಲಿ ಮಹಿಳೆ ಬಲಿ! ದೇಶದ ಒಟ್ಟು ಸೋಂಕಿತರ ಸಂಖ್ಯೆ 88ಕ್ಕೆ ಏರಿಕೆ
ದೆಹಲಿಯ ಜನಕಪುರಿಯ 69 ವರ್ಷದ ಮಹಿಳೆ ಶುಕ್ರವಾರ ಕೊರೋನಾವೈರಸ್ ನಿಂದ ಸಾವನ್ನಪ್ಪಿದ್ದ ನಂತರ ದೇಶದಲ್ಲಿ ಕೊರೋನಾವೈರಸ್ ನಿಂದ ಮೃತಪಟ್ಟವರ ಸಂಖ್ಯೆ ಎರಡಕ್ಕೆ ಏರಿದೆ. ದೆಹಲಿಯ ಆಸ್ಪತ್ರೆಯಲ್ಲಿ ಕೊರೋನಾವೈರಸ್ ಬಾಧಿತ ಮಹಿಳೆ ಮೃತಪಟ್ಟಿದ್ದಾರೆ. ಇದೇ ವೇಳೆ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 88 ಕ್ಕೆ ಏರಿದೆ.