ರಾಜ್ಯಹುಲಿ ಗಣತಿ ವರದಿ: ದೇಶದ ಅಗ್ರ 12ರಲ್ಲಿ ಕರ್ನಾಟಕದ ಎಲ್ಲಾ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಸ್ಥಾನ
ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ಬಿಡುಗಡೆ ಮಾಡಿರುವ ಭಾರತದ ಹುಲಿ ಸಂರಕ್ಷಿತ ವರದಿಯ ಐದನೇ ನಿರ್ವಹಣೆ ಪರಿಣಾಮಕಾರಿತ್ವ ಮೌಲ್ಯಮಾಪನದಲ್ಲಿ ಕರ್ನಾಟಕದ ಎಲ್ಲಾ ಐದು ಹುಲಿ ಸಂರಕ್ಷಿತ ಪ್ರದೇಶಗಳು ಅಗ್ರ 12ರಲ್ಲಿ ಸ್ಥಾನಪಡೆದಿವೆ. ಬಂಡೀಪುರ ಶೇ. 93.18 ಅಂಕಗಳೊಂದಿಗೆ ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದೊಂದಿಗೆ ಎರಡನೇ ಸ್ಥಾನವನ್ನು ಹಂಚಿಕೊಂಡಿದೆ.