ವಿದೇಶನೇಪಾಳ ದುಸ್ಸಾಹಸ: ಭಾರತದ ಭೂ ಭಾಗ ತನ್ನದೆಂದು ತೋರಿಸುವ ಹೊಸ ಭೂಪಟಕ್ಕೆ ಸಂಪುಟ ಅಂಗೀಕಾರ!
ಭಾರತ- ನೇಪಾಳ ನಡುವೆ ನಡುವೆ ಗಡಿ ವಿವಾದ ತಲೆ ಎತ್ತಿರುವ ಪ್ರಸ್ತುತ ಸಂದರ್ಭದಲ್ಲಿ, ಭಾರತದ ಭೂ ಪ್ರದೇಶವಾಗಿರುವ ಲಿಪುಲೇಖ್, ಕಾಲಾಪಾನಿ, ಪಿಂಪಿಯಾಧುರ ಪ್ರದೇಶಗಳು ತಮಗೆ ಸೇರಿದ್ದು ಎಂದು ತೋರಿಸುವ ಹೊಸ ರಾಜಕೀಯ ಭೂಪಟ(ಪೊಲಿಟಿಕಲ್ ಮ್ಯಾಪ್)ಕ್ಕೆ ನೇಪಾಳ ಸಚಿವ ಸಂಪುಟ ಅನುಮೋದನೆ ನೀಡಿರುವುದು ತೀವ್ರ ವಿವಾದ ಸೃಷ್ಟಿಸಿದೆ.