ರಾಜ್ಯವಿವಾಹಾಕಾಂಕ್ಷಿಗಳಿಗೆ ಸಿಹಿಸುದ್ದಿ! ಭಾನುವಾರ ಲಾಕ್ಡೌನ್ ಇದ್ದರೂ ಮದುವೆ ಕಾರ್ಯಕ್ರಮ ನಡೆಸಬಹುದು-ರಾಜ್ಯಸರ್ಕಾರ ಆದೇಶ
ವಿವಾಹಾಕಾಂಕ್ಷಿಗಳಿಗೆ, ಈಗಾಗಲೇ ವಿವಾಹ ದಿನ ನಿಶ್ಚಯವಾಗಿರುವವರಿಗೆ ರಾಜ್ಯ ಸರ್ಕಾರ ಶುಭ ಸುದ್ದಿ ಕೊಟ್ಟಿದೆ. ದೇಶದಲ್ಲಿ ಕೊರೋನಾ ಲಾಕ್ಡೌನ್ ಜಾರಿಯಲ್ಲಿದ್ದು ರಾಜ್ಯದಲ್ಲಿ ಬಹುವಿಧದ ರಿಯಾಯಿತಿಗಳಿದ್ದರೂ ಭಾನುವಾರ ಸಂಪೂರ್ಣ ಲಾಕ್ಡೌನ್ ಜಾರಿಯಾಗಿರಲಿದೆ ಎಂದು ಸರ್ಕಾರ ಹೇಳಿತ್ತು. ಆದರೆ ಇದೀಗ ಭಾನುವಾರಗಳಂದು ಮದುವೆ ಸಮಾರಂಭಗಳಿಗೆ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ.