ಸಿನಿಮಾಡಿಯರ್ ಕಣ್ಮಣಿ ಮೂಲಕ ಕಿರುತೆರೆಯಿಂದ ಬೆಳ್ಳಿ ತೆರೆಗೆ ಭವ್ಯಾಗೌಡ
ಕಿರಿಕ್ ಮಾಡಿದರೆ ಹೊಡಿಯೋಕೂ ಸೈ, ಪ್ರೀತಿ ಮಾಡೋರಿಗೆ ಜೀವ ಕೊಡೋಕೂ ಸೈ ಎನ್ನುವ ಮುದ್ದು ಹುಡುಗಿ "ಗೀತಾ".. ಈಗ ದೊಡ್ಡಪರದೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. "ಗೀತಾ" ಧಾರಾವಾಹಿಯ ನಟಿ ಭವ್ಯಾಗೌಡ "ಡಿಯರ್ ಕಣ್ಮಣಿ' ಸಿನಿಮಾದಲ್ಲಿ ಮುಖ್ಯವಾದ ಪಾತ್ರವೊಂದಕ್ಕೆ ಬಣ್ಣಹಚ್ಚಲಿದ್ದಾರೆ.