ಭವಾನಿಪುರ ಉಪ ಚುನಾವಣೆ

ಪಶ್ಚಿಮ ಬಂಗಾಳ ಉಪ ಚುನಾವಣೆ: ಎಲ್ಲರ ಚಿತ್ತ ಭವಾನಿಪುರದತ್ತ; ಜಂಗೀಪುರ್, ಸಂಸರ್‌ಗಂಜ್‌ನಲ್ಲೂ ಮತದಾನ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಭವಿಷ್ಯ ನಿರ್ಧಾರವಾಗುವ ದಿನ ಇಂದು. ಗುರುವಾರ ಬೆಳಗ್ಗೆ 7 ಗಂಟೆಗೆ ಭವಾನಿಪುರ ಕ್ಷೇತ್ರದ ಉಪ ಚುನಾವಣೆಗೆ ಮತದಾನ ಆರಂಭವಾಗಿದ್ದು ತೀವ್ರ ಭದ್ರತೆ ನಡುವೆ ಮತದಾನ ಸಾಗುತ್ತಿದೆ.

'ನಿಗದಿಯಂತೆ ಭವಾನಿಪುರ ಉಪ ಚುನಾವಣೆ': ಪಿಐಎಲ್ ವಜಾಗೊಳಿಸಿದ ಕೋಲ್ಕತಾ ಹೈಕೋರ್ಟ್
ನಿಗದಿತ ವೇಳಾಪಟ್ಟಿಯಂತೆಯೇ ಭವಾನಿಪುರ ಉಪ ಚುನಾವಣೆ ನಡೆಯಲಿದೆ ಎಂದು ಹೇಳಿರುವ ಕೋಲ್ಕತಾ ಹೈಕೋರ್ಟ್ ಈ ಸಂಬಂಧ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದೆ.

ಭವಾನಿಪುರ ಉಪ ಚುನಾವಣೆ: ಮತದಾನದ ದಿನ ಸೆಕ್ಷನ್ 144, ಕೇಂದ್ರಿಯ ಪಡೆ ನಿಯೋಜನೆಗೆ ಬಿಜೆಪಿ ಒತ್ತಾಯ
ಉಪ ಚುನಾವಣೆ ನಡೆಯಲಿರುವ ಸೆಪ್ಟೆಂಬರ್ 30 ರಂದು ಭವಾನಿಪುರ ಕ್ಷೇತ್ರದಲ್ಲಿ ಸೆಕ್ಷನ್ 144 ಜಾರಿಗೊಳಿಸಬೇಕು ಹಾಗೂ ಪ್ರತಿಯೊಂದು ಮತಗಟ್ಟೆಗಳಲ್ಲಿ ಕೇಂದ್ರಿಯ ಪ್ಯಾರಾಮಿಲಿಟರಿ ಪಡೆ ನಿಯೋಜಿಸಬೇಕೆಂದು ಬಿಜೆಪಿ ನಿಯೋಗವೊಂದು ಸೋಮವಾರ ಪಶ್ಚಿಮ ಬಂಗಾಳ ಮುಖ್ಯ ಚುನಾವಣಾಧಿಕಾರಿಗಳನ್ನು ಒತ್ತಾಯಿಸಿ, ಮನವಿ ಸಲ್ಲಿಸಿದೆ.

ಭವಾನಿಪುರ ಕ್ಷೇತ್ರದಿಂದ ಸ್ಪರ್ಧಿಸುವುದು ನನ್ನ ವಿಧಿ, ಬಿಜೆಪಿ ಹೊರಗಿನವರನ್ನು ಕರೆತಂದು ಅವಾಂತರ ಸೃಷ್ಟಿಸುತ್ತಿದೆ: ಮಮತಾ ಬ್ಯಾನರ್ಜಿ
ಭವಾನಿಪುರ ಕ್ಷೇತ್ರದಿಂದ ಸ್ಪರ್ಧಿಸುವುದು ತಮ್ಮ ವಿಧಿಯಾಗಿದ್ದು, ಬಿಜೆಪಿ ಉಪಚುನಾವಣೆಯ ಸಮಯದಲ್ಲಿ ಇಲ್ಲಿ ಅವಾಂತರಗಳನ್ನು ಸೃಷ್ಟಿಸಲು ಬೇರೆ ರಾಜ್ಯಗಳಿಂದ ಜನರನ್ನು ಕಳುಹಿಸುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಭವಾನಿಪುರ ಉಪಚುನಾವಣೆ: ನಾಮಪತ್ರ ಸಲ್ಲಿಸಿದ ಸಿಎಂ ಮಮತಾ, ದೀದಿಗೆ ಎದುರಾಳಿಯಾಗಿ ಬಿಜೆಪಿಯಿಂದ ಪ್ರಿಯಾಂಕಾ ಸ್ಪರ್ಧೆ
ಸೆಪ್ಟೆಂಬರ್ 30ರಂದು ನಡೆಯಲಿರುವ ಭವಾನಿಪುರ ವಿಧಾನಸಭಾ ಉಪಚುನಾವಣೆಗೆ ಇಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಾಮಪತ್ರ ಸಲ್ಲಿಸಿದ್ದು ದೀದಿಗೆ ಎದುರಾಳಿಯಾಗಿ ಬಿಜೆಪಿಯಿಂದ ಪ್ರಿಯಾಂಕಾ ಟಿಬ್ರೂವಾಲ್ ಸ್ಪರ್ಧಿಸಲಿದ್ದಾರೆ.

