ದೇಶಕೊರೋನಾ ನಡುವೆ ಉಗ್ರ ಕೃತ್ಯಕ್ಕೆ ಸಂಚು: ಪಾಕ್, ಬಾಂಗ್ಲಾ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲು ಬಿಎಸ್ಎಫ್ ಗೆ ಅಮಿತ್ ಷಾ ಸೂಚನೆ
ಭಾರತ-ಪಾಕಿಸ್ತಾನ ಮತ್ತು ಭಾರತ-ಬಾಂಗ್ಲಾದೇಶ ಗಡಿಗಳ ನಿರ್ವಹಣೆಯನ್ನು ಪರಿಶೀಲಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ, ದೇಶದೊಳಗೆ ಒಳನುಸುಳಲು ಕೊವಿಡ್-19 ಆತಂಕ ಸೂಕ್ತ ಸಮಯವಾಗಿದೆ ಎಂದು ಭಯೋತ್ಪಾದಕ ಸಂಘಟನೆಗಳು ಕಾಯುತ್ತಿರುವುದರಿಂದ ಗಡಿಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಗಡಿ ಭದ್ರತಾ ಪಡೆ (ಬಿಎಸ್ಎಫ್)ಗೆ ಸೂಚಿಸಿದ್ದಾರೆ.