ವಿದೇಶಭೀಕರ ಕದನಕ್ಕೆ ಒಂದು ತಿಂಗಳು: ಯುದ್ಧದ ನಂತರ ಗಾಜಾದ 'ಸುರಕ್ಷತಾ ಜವಾಬ್ದಾರಿ' ತನ್ನದು ಎಂದ ಇಸ್ರೇಲ್!
ಯುದ್ಧದ ನಂತರ ಮುತ್ತಿಗೆ ಹಾಕಿದ ಗಾಜಾದ "ಒಟ್ಟಾರೆ ಭದ್ರತೆ" ಯನ್ನು ಇಸ್ರೇಲ್ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಭರವಸೆ ನೀಡಿದ್ದಾರೆ. ಈಗಾಗಲೇ ನಾಗರಿಕರ ಸಾವಿನ ಸಂಖ್ಯೆ 10 ಸಾವಿರ ಗಡಿ ದಾಟಿದೆ ಎಂದು ಹಮಾಸ್ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.