ದೇಶG20 ಶೃಂಗಸಭೆ: ಮುಕ್ತ ವ್ಯಾಪಾರ ಒಪ್ಪಂದದತ್ತ 'ವೇಗವಾಗಿ ಕೆಲಸ ಮಾಡಲು' ಪ್ರಧಾನಿ ಮೋದಿ, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಒಪ್ಪಿಗೆ
ದೆಹಲಿಯಲ್ಲಿ ನಡೆಯುತ್ತಿರುವ ಮಹತ್ವದ ಜಿ20 ನಾಯಕರ ಶೃಂಗಸಭೆಯ ನಡುವೆಯೇ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ರಿಷಿ ಸುನಕ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು ಈ ವೇಳೆ ಉಭಯ ನಾಯಕರು ಮುಕ್ತ ವ್ಯಾಪಾರ ಒಪ್ಪಂದದತ್ತ 'ವೇಗವಾಗಿ ಕೆಲಸ ಮಾಡಲು' ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.