ರಾಜ್ಯಬೆಂಗಳೂರು ಅಗ್ನಿ ಅವಘಡ: ಅಮೆರಿಕದಿಂದ ಬಂದ 24 ಗಂಟೆಗಳಲ್ಲೇ ಘನಘೋರ ದುರಂತ..!
ಬೆಂಗಳೂರು ಅಪಾರ್ಟ್ಮೆಂಟ್ ಅಗ್ನಿ ಅವಘಡದಲ್ಲಿ ಸಜೀವ ದಹನವಾದ ತಾಯಿ ಮತ್ತು ಮಗಳ ದುರಂತ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ದುರಂತದಲ್ಲಿ ಸಾವನ್ನಪ್ಪಿದ ತಾಯಿ ಲಕ್ಷ್ಮೀದೇವಿ (82 ವರ್ಷ), ಪುತ್ರಿ ಭಾಗ್ಯ ರೇಖಾ (59 ವರ್ಷ) ಅವರು ನಿನ್ನೆಯಷ್ಟೇ ಅಮೆರಿಕದಿಂದ ಬೆಂಗಳೂರಿಗೆ ಆಗಮಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.